Spread the love

ಉಡುಪಿ: ದಿನಾಂಕ:31-03-2023(ಹಾಯ್ ಉಡುಪಿ ನ್ಯೂಸ್) ಆದಿಉಡುಪಿಯಲ್ಲಿ ಯುವಕನೋರ್ವನ ಮನೆಗೆ ನುಗ್ಗಿದ ನಾಲ್ವರು ಯುವಕರು ಹರಿತವಾದ ಆಯುಧದಿಂದ ತಿವಿದು ಜೀವ ಬೆದರಿಕೆ ಹಾಕಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಶಾಂತ (27) ವಾಸ: ಕಸ್ತೂರಿಬಾಗ್‌, ಎಪಿಎಂಸಿ ಮಾರ್ಕೇಟ್‌ನ ಹಿಂಬದಿ, ಆದಿ ಉಡುಪಿ, ಉಡುಪಿ ತಾಲೂಕು ಇವರು ದಿನಾಂಕ 30/03/2023 ರಂದು ಬೆಳಗಿನ ಜಾವ 01:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಆದಿಉಡುಪಿ ಎಪಿಎಂಸಿ ಮಾರ್ಕೇಟ್‌ನ ಹಿಂಬದಿಯಲ್ಲಿರುವ ತನ್ನ ಮನೆಯಲ್ಲಿರುವಾಗ 4 ಜನ ಆರೋಪಿಗಳಾದ ಪ್ರಶಾಂತ ಹಾಗೂ ಸಂತೋಷ ಮತ್ತು ಇತರ ಇಬ್ಬರು ಪ್ರಶಾಂತ ರವರ ಮನೆಯ ಮುಂದಿನ ಬಾಗಿಲನ್ನು ಬಲವಂತವಾಗಿ ದೂಡಿ ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ, ಪ್ರಶಾಂತರನ್ನು ಉದ್ದೇಶಿಸಿ, ನೀನು ಬಾರಿ ಮಾತನಾಡುತ್ತೀಯಾ, ಎಂದು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದೂರಿದ್ದಾರೆ, ಹಾಗೂ ಆರೋಪಿಗಳಲ್ಲಿ ಓರ್ವನು ಪ್ರಶಾಂತ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಕ್ಷೌರಿಕರು ಉಪಯೋಗಿಸುವ ಲೇಸರ್‌ ಬ್ಲೇಡ್‌ ನಿಂದ ಪ್ರಶಾಂತರ ಬಲಭಾಗದ ಎದೆ ಹಾಗೂ ಹೊಟ್ಟೆಗೆ ಗೀರಿದ ಪರಿಣಾಮ ಪ್ರಶಾಂತ ರವರಿಗೆ ಗಂಭೀರ ಸ್ವರೂಪದ ಗಾಯವಾಗಿರುತ್ತದೆ ಎಂದು ದೂರಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!