ಹೆಬ್ರಿ: ದಿನಾಂಕ :30-03-2023 (ಹಾಯ್ ಉಡುಪಿ ನ್ಯೂಸ್) ಮುದ್ರಾಡಿ ಪೇಟೆಯ ಅಟೋ ರಿಕ್ಷಾ ನಿಲ್ದಾಣದ ಬಳಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಹೆಬ್ರಿ ಪೋಲೀಸರು ಬಂಧಿಸಿದ್ದಾರೆ .
ಹೆಬ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಂದಕುಮಾರ.ಎಂ.ಎಂ. ಅವರಿಗೆ ದಿನಾಂಕ: 29-03-2023 ರಂದು ಬಂದ ಖಚಿತ ಮಾಹಿತಿಯಂತೆ ಮುದ್ರಾಡಿ ಗ್ರಾಮದ ಮುದ್ರಾಡಿಪೇಟೆಯ ಅಟೋರಿಕ್ಷಾ ನಿಲ್ದಾಣದ ಬಳಿಗೆ ತಲುಪಿದಾಗ ಅಲ್ಲಿ ದಿನೇಶ ದೇವಾಡಿಗ (42), ವಾಸ; ಶ್ರೀ ಸನ್ನಿಧಿ ಮೇಲಡ್ಕ ವರಂಗ ಗ್ರಾಮ ಹೆಬ್ರಿ ತಾಲೂಕು ಎಂಬಾತ ಅಟೋರಿಕ್ಷಾ ನಿಲ್ದಾಣದ ಬದಿಯಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 70 ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕರೆದು ಚೀಟಿಯ ಮೇಲೆ ಪೆನ್ನಿನಿಂದ ಅಂಕಿಗಳನ್ನು ಬರೆಯುತ್ತಿದ್ದು ಆತನನ್ನು ಪೊಲೀಸರು ಬಂಧಿಸಿ ಅತನ ಬಳಿಯಿದ್ದ 1,520 /-ರೂಪಾಯಿ ನಗದು , ಮಟ್ಕಾ ನಂಬ್ರ ಬರೆದ ಚೀಟಿ ಹಾಗೂ ಬಾಲ್ ಪೆನ್ನನ್ನುಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.