- ಉಡುಪಿ: ದಿನಾಂಕ:30-03-2023(ಹಾಯ್ ಉಡುಪಿ ನ್ಯೂಸ್) ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಮಹಿಳೆಯೋರ್ವರ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ಕ್ಕೂ ಮಿಕ್ಕಿ ಹಣ ಲಪಟಾಯಿಸಿರುವ ಬಗ್ಗೆ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
- 29/03/2023 ರಂದು ಸದಾಶಿವ ಹೆಗ್ಡೆ ಎಂಬವರ ಹೆಂಡತಿ ಪ್ರತಿಭಾ ಎಸ್. ಹೆಗ್ಡೆ ಎಂಬವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಡೆಬಿಟ್ ಕಾರ್ಟ್ ಬ್ಲಾಕ್ ಆಗಿದೆ ಈ ಕೂಡಲೇ ರಿನಿವಲ್ ಮಾಡುವಂತೆ ತಿಳಿಸಿ, ಸದಾಶಿವ ಹೆಗ್ಡೆ ಯವರ ಹೆಂಡತಿಯವರಿಂದ ಕಾರ್ಡ್ ನಂಬ್ರ ಹಾಗೂ OTP ಯನ್ನು ಪಡೆದು, ಸದಾಶಿವ ಹೆಗ್ಡೆ ಅವರ ಹೆಂಡತಿಯವರು ಕೆನರಾ ಬ್ಯಾಂಕ್ ಬ್ರಹ್ಮಾವರ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಕ್ರಮವಾಗಿ, ರೂಪಾಯಿ 50,000/-, 50,000/-, 2,000/- ಮತ್ತು 2,500/- ರಂತೆ ಒಟ್ಟು 1,04,500/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ನಷ್ಟ ಉಂಟು ಮಾಡಿರುತ್ತಾರೆ ಎಂದು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.