ಶಂಕರನಾರಾಯಣ: ದಿನಾಂಕ : 29/03/2023(ಹಾಯ್ ಉಡುಪಿ ನ್ಯೂಸ್) ಶಂಕರನಾರಾಯಣ ಗ್ರಾಮದ ಕಲ್ಲಹೊಳೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ತಾಲೂಕು , ಸಿದ್ಧಾಪುರ ಗ್ರಾಮದ ಕಿರ್ಲಾಡಿ ಐರಬೈಲು ನಿವಾಸಿ ಗಣೇಶ ಶೆಟ್ಟಿ ಎಂಬಾತ ದಿನಾಂಕ:28-03-2023ರಂದು ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕಲ್ಲಹೊಳೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮೈಸೂರು ಲ್ಯಾನ್ಸರ್ ವಿಸ್ಕಿ 90 ಎಮ್‌ಎಲ್.52 ಸ್ಯಾಚೆಟ್ ಹಾಗೂ ಒರಿಜಿನಲ್ ಚಾಯ್ಸ 90 ಎಮ್‌ಎಲ್ 5 ಸ್ಯಾಚೆಟ್ ಹಾಗೂ ಒರಿಜಿನಲ್ ಚಾಯ್ಸ 180 ಎಮ್‌ಎಲ್ 1 ಸ್ಯಾಚೆಟ್ ಮದ್ಯವನ್ನು ಚೀಲದಲ್ಲಿ ಇರಿಸಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಲ್ಲಿಗೆ ಶಂಕರನಾರಾಯಣ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಭರತ್ ಕುಮಾರ್ ವಿ ಯವರು ದಾಳಿ ನಡೆಸಿ ಮದ್ಯದ ಸ್ಯಾಚೆಟ್ ಅನ್ನು ವಶಪಡಿಸಿಕೊಂಡಿರುತ್ತಾರೆ, ವಶಪಡಿಸಿಕೊಂಡ ಮದ್ಯದ ಸ್ಯಾಚೆಟ್ ಮೌಲ್ಯ 2100/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.