Spread the love

ಬ್ರಹ್ಮಾವರ : ದಿನಾಂಕ: 28-03-2023 (ಹಾಯ್ ಉಡುಪಿ ನ್ಯೂಸ್) ಬಾರ್ಕೂರು ರಂಗನ ಕೆರೆ ನಿವಾಸಿ ಯುವತಿಗೆ ಕೆಲಸಕ್ಕೆ ತೆರಳದಂತೆ ತಡೆ ಮಾಡಿ ಬೈದು ಹಲ್ಲೆ ನಡೆಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ರಹ್ಮಾವರ ತಾಲೂಕು,ಹೇರಾಡಿ ಗ್ರಾಮದ ಬಾರ್ಕೂರು,ರಂಗನ ಕೆರೆ ನಿವಾಸಿ ಸುನಿತಾ (36) ಎಂಬವರು ದಿನಾಂಕ 27/03/2023 ರಂದು ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಲೆಂದು ಮನೆಯಿಂದ ಹೊರಡುವಾಗ ಅವರ  ಅಣ್ಣ ಕೃಷ್ಣ ಎಂಬವನು  ತಡೆದು ನಿಲ್ಲಿಸಿ ನೀನು ಕೆಲಸಕ್ಕೆ ಹೋಗುವುದು ಬೇಡ ಮನೆಯಲ್ಲಿಯೇ ಇರು ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂದು ಸುನಿತಾ ದೂರಿದ್ದಾರೆ. ಅದಕ್ಕೆ ಸುನಿತಾರವರು ಕೆಲಸಕ್ಕೆ ಹೋಗುತ್ತೇನೆ ನನ್ನ ಖರ್ಚಿಗೆ ಯಾರೂ ಹಣ ಕೊಡುವುದಿಲ್ಲ ಎಂದು  ಹೇಳಿದ್ದಕ್ಕೆ ಅಣ್ಣ ಕ್ರಷ್ಣನು ಬಾಗಿಲು ಹಾಕಿ ಸುನಿತಾರಿಗೆ ಒಂದು ಕೋಲಿನಿಂದ ಕೈಗೆ, ಕಾಲಿಗೆ ಹೊಡೆದಿದ್ದು ಹೊಡೆಯುವಾಗ ತಲೆಯು ಗೋಡೆಗೆ ತಾಗಿ ಗಾಯವಾಗಿರುತ್ತದೆ. ಅಲ್ಲದೇ ಹೊಡೆದ ಏಟಿಗೆ ಬಲಕೈಗೆ ಗಾಯವಾಗಿದ್ದು ತೊಡೆಯಲ್ಲಿ ಸಹ ರಕ್ತ ಹೆಪ್ಪುಗಟ್ಟಿರುತ್ತದೆ. ಅದೇ ಸಮಯ ಅತ್ತಿಗೆ ಶಿಲ್ಪಾರವರು ಕೂಡ  ಹಲ್ಲೆ ಮಾಡಿರುತ್ತಾರೆ ಎಂದು ಸುನೀತಾರವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!