images-23.jpeg
Spread the love

ಉಡುಪಿ: ದಿನಾಂಕ: 29-03-2023(ಹಾಯ್ ಉಡುಪಿ ನ್ಯೂಸ್) ಆನ್ಲೈನ್ ನಲ್ಲಿ ಕ್ರೀಂ ಖರೀದಿ ಮಾಡಲು ಪ್ರಯತ್ನಿಸಿದ್ದ ಯುವತಿ ಯೋರ್ವರನ್ನು ಆನ್ಲೈನ್ ವಂಚಕರು ನಂಬಿಸಿ ಅವರ ಖಾತೆಯಿಂದ ಲಕ್ಷಾಂತರ ರೂಪಾಯಿ ಎಗರಿಸಿರುವ ಬಗ್ಗೆ ದೂರು ದಾಖಲಾಗಿದೆ.

ಜ್ಯೋತಿ ಉಡುಪಿ (32) ಎಂಬವರು ಮುಖಕ್ಕೆ ಹಚ್ಚುವ ಕ್ರೀಂ ಅನ್ನು ಆನ್‌‌ಲೈನ್ ನಲ್ಲಿ ಖರೀದಿಸಲು ಹುಡುಕುತ್ತಿದ್ದ ಸಂದರ್ಭದಲ್ಲಿ Cosderma-App ನಲ್ಲಿ ಕಂಡುಬಂದ ಮೊಬೈಲ್ ನಂಬ್ರಕ್ಕೆ  ಕರೆ ಮಾಡಿದಾಗ ಆ ನಂಬ್ರದ ವ್ಯಕ್ತಿ paytid.co.in ನಲ್ಲಿ ರಿಜಿಸ್ಟರ್ ಮಾಡುವಂತೆ ಲಿಂಕ್ ಕಳುಹಿಸಿದ್ದು, ಜ್ಯೋತಿರವರು ನಂಬಿ ರಿಜಿಸ್ಟರ್ ಮಾಡಿರುತ್ತಾರೆ.

ದಿನಾಂಕ 22/03/2023 ರಂದು ಅಪರಿಚಿತ ವ್ಯಕ್ತಿಯೋರ್ವ ಜ್ಯೋತಿಯವರ ಮೊಬೈಲ್ ನಂಬ್ರಕ್ಕೆ  ಕರೆ ಮಾಡಿ, ತಾನು ಮೇಲೆ ನಮೂದಿಸಿದ ಕಂಪೆನಿಯವನೆಂದು ತಿಳಿಸಿ, ನೀವು ಈ ಹಿಂದೆ ಮಾಡಿರುವ ರಿಜಿಸ್ಟರ್ ಸರಿಯಿಲ್ಲ ಎಂದು ಹೇಳಿ ಬೇರೊಂದು ಲಿಂಕ್ ಕಳುಹಿಸಿದ್ದು, ಜ್ಯೋತಿಯವರು ಆತನು ಅದೇ ಕಂಪೆನಿಯವನೆಂದು ನಂಬಿ, ಆತನು ಕಳುಹಿಸಿದ ಲಿಂಕ್ ನಲ್ಲಿ ವಿವರವನ್ನು ಅಪ್‌‌ಡೇಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆದರೆ, ದಿನಾಂಕ 24/03/2023 ರಂದು ಜ್ಯೋತಿ ಯವರು ಖಾತೆ ಹೊಂದಿದ್ದ ಸಾಲಿಗ್ರಾಮ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಿಂದ  ರೂಪಾಯಿ 99,999/- ದಿನಾಂಕ 25/03/2023 ರಂದು ಕ್ರಮವಾಗಿ ರೂಪಾಯಿ 90,000/- ಮತ್ತು ರೂಪಾಯಿ 8,000/- ಹಣ ಕಡಿತಗೊಂಡಿರುತ್ತದೆ ಎಂದಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿಗಳು Cosderma ಕಂಪೆನಿಯವರೆಂದು ಹೇಳಿ, ಮುಖಕ್ಕೆ ಹಚ್ಚುವ ಕ್ರೀಂ ನೀಡುವುದಾಗಿ ಜ್ಯೋತಿ ಯವರನ್ನು ನಂಬಿಸಿ, ಜ್ಯೋತಿ ಯವರಿಂದ ವಿವರ ಪಡೆದು, ಅವರ ಖಾತೆಯಿಂದ ಒಟ್ಟು ರೂಪಾಯಿ 1,97,999/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಕೊಂಡು ಕ್ರೀಂ ಅನ್ನೂ ನೀಡದೆ ,ಪಡೆದ ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಕಲಂ: 66(C), 66(D)   ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿದೆ.

error: No Copying!