ಪಡುಬಿದ್ರಿ: ದಿನಾಂಕ:26-03-2023 (ಹಾಯ್ ಉಡುಪಿ ನ್ಯೂಸ್) ಪಲಿಮಾರು ಗ್ರಾಮದ ಮಟ್ಟುವಿನಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಪಡುಬಿದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪಡುಬಿದ್ರಿ ಠಾಣಾ ಪಿಎಸ್‌ಐ (ಕಾ,.ಸು & ಸಂಚಾರ) ಆದ ಪುರುಷೋತ್ತಮ ಎ ರವರು ದಿನಾಂಕ 23.03.2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕಾಪು ತಾಲೂಕು ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಧೂಮಾವತಿ ದೈವಸ್ಥಾನದ ಬಳಿ ಪಾಳುಬಿದ್ದ ಗದ್ದೆಯ ಬದಿಯಲ್ಲಿ ಕೆಲವರು ಇಸ್ಪೀಟು ಎಲೆಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕೂಡಲೇ ಆ ಸ್ಥಳಕ್ಕೆ ಠಾಣಾ ಸಿಬ್ಬಂದಿ ಗಳೊಂದಿಗೆ ದಾಳಿ ನಡೆಸಿದಾಗ ಅಲ್ಲಿ ಏಳು ಜನರು ವ್ರತ್ತಾಕಾರದಲ್ಲಿ ನೆಲದ ಮೇಲೆ ಪೇಪರನ್ನು ಹಾಸಿ ಕುಳಿತುಕೊಂಡು ಅವರಲ್ಲಿ ಒಬ್ಬನ ಕೈಯಲ್ಲಿ ಇಸ್ಪೀಟು ಎಲೆಗಳನ್ನು ಪೇಪರ್‌ನ ಮೇಲೆ ಹಾಕುತ್ತಾ ಉಲಾಯಿ-ಪಿದಾಯಿ ಎಂದು ಹೇಳುತ್ತ ಜೂಜು ಆಡುತ್ತಿದ್ದವರನ್ನು ಬಂಧಿಸಿ ಆರೋಪಿಗಳಿಂದ ಇಸ್ಪೀಟು ಎಲೆಗಳು-52, ನಗದು 14,900/- ರೂ. ಅರ್ಧ ಹೊತ್ತಿ ಉರಿದ ಕ್ಯಾಂಡಲ್-2, ಹಳೆಯ ನ್ಯೂಸ್ ಪೇಪರ್-2 ನ್ನುಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿಗಳ ವಿರುದ್ಧ ಕಲಂ: 87 ಕೆ.ಪಿ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.