Spread the love
  • ಪಡುಬಿದ್ರಿ:  ದಿನಾಂಕ 26-03-2023(ಹಾಯ್ ಉಡುಪಿ ನ್ಯೂಸ್) ಉಚ್ಚಿಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
  • 23.03.2023 ರಂದು ಪಡುಬಿದ್ರಿ ಪೊಲೀಸ್ ಠಾಣಾ ಸಿಬ್ಬಂದಿಯವರು ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದಾಗ ಕಾಫು ತಾಲೂಕು ಬಡಾ ಗ್ರಾಮದ ಉಚ್ಚಿಲದಲ್ಲಿ ಕೆವಿನ್‌ಕುಲ್‌ದೀಪ್‌ಮಜಲು ಹಾಗೂ ಅಶ್ವಿನ್ ಪೂಜಾರಿ ಎಂಬವರು ಯಾವುದೋ ಅಮಲಿನಲ್ಲಿದ್ದವರಂತೆ ತೂರಾಡುತ್ತಿದ್ದು, ಅವರು ಯಾವುದೋ ಮಾದಕ ಪದಾರ್ಥ ಸೇವಿಸಿರಬಹುದು ಎಂಬ ಬಗ್ಗೆ  ಅನುಮಾನಗೊಂಡು ಇಬ್ಬರನ್ನೂ ಪೊಲೀಸರು ಬಂಧಿಸಿ, ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆತಂದು ಅವರು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಯವರ ಎದುರು ಹಾಜರುಪಡಿಸಿ ವೈದ್ಯಕೀಯ ತಪಾಸಣೆಗೊಳಪಡಿಸಿದ್ದು, ಕೆವಿನ್‌ಕುಲ್‌ದೀಪ್‌ಮಜಲು ಹಾಗೂ ಅಶ್ವಿನ್ ಪೂಜಾರಿ ಎಂಬವರು ಮಾದಕ ವಸ್ತುವಾದ ಗಾಂಜಾ ಸೇವಿಸಿರುವುದಾಗಿ ದಿನಾಂಕ: 25.03.2023 ರಂದು ವೈದ್ಯರು ದೃಢ ಪತ್ರವನ್ನು ನೀಡಿದ್ದು ಪಡುಬಿದ್ರಿ ಠಾಣೆಯ ಪಿಎಸ್ಐ (ಕಾ.ಸು) ಪುರುಷೋತ್ತಮ ಎ ರವರು ಆರೋಪಿಗಳವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 27 (b) NDPS Act ಕಾಯ್ದೆಯಂತೆ ಪ್ರಕರಣ ದಾಖಲಿಸಿರುತ್ತಾರೆ.
error: No Copying!