ಮಣಿಪಾಲ: ದಿನಾಂಕ:26-03-2023(ಹಾಯ್ ಉಡುಪಿ ನ್ಯೂಸ್) ಹೆರ್ಗ ಗ್ರಾಮದ ಸರಳೆಬೆಟ್ಟು, ಮಾವಿನ ಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
- ದಿನಾಂಕ 18/03/2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಸಾತ್ವಿಕ್ ಜೋಷಿ (19) ವಾಸ: ರೂಂ ನಂಬ್ರ 506, ಹೈ ಪಾಯಿಂಟ್ ಹೈಟ್ಸ್‌ಅಪಾರ್ಟ್ಮೆಂಟ್ ಮಣಿಪಾಲ, ಶಿವಳ್ಳಿ ಗ್ರಾಮ ಉಡುಪಿ ಹಾಗೂ ಗೋವಿಂದ ಆರ್ ನಾಯರ್ (22) ವಾಸ:ರೂಂ ನಂಬರ್:506,ಹೈ ಪಾಯಿಂಟ್ ಹೈಟ್ಸ್ ಅಪಾರ್ಟ್ ಮೆಂಟ್, ಮಣಿಪಾಲ, ಶಿವಳ್ಳಿ ಎಂಬಿಬ್ಬರನ್ನು ಸೆನ್ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿಯವರಾದ ಜೀವನ್ ರವರು ಬಂಧಿಸಿ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಠಾಣೆಗೆ ಕರೆತಂದು ಹಿರಿಯ ಅಧಿಕಾರಿಗಳ ಆದೇಶದಂತೆ ಇಬ್ಬರು ಆರೋಪಿಗಳನ್ನು ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ.
- ದಿನಾಂಕ 25/03/2023 ರಂದು ಅಶೋಕ್ ಕುಮಾರ್ ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ. ಇವರಿಗೆ ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞರ, ವರದಿಯಲ್ಲಿ ಆರೋಪಿಗಳಾದ ಸಾತ್ವಿಕ್ ಜೋಷಿ ಹಾಗೂ ಗೋವಿಂದ ಆರ್ ನಾಯರ್ ಅವರುಗಳು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ: 27 (ಬಿ) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.