ಮಣಿಪಾಲ: ದಿನಾಂಕ :25-03-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪರಿಸರದಲ್ಲಿ ತಡ ರಾತ್ರಿ ಗಾಂಜಾ ಸೇವನೆ ಮಾಡುತ್ತಿದ್ದಂತಹ ಆರು ಜನ ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಠಾಣಾ ಸಿಬ್ಬಂದಿಗಳಾದ ಹೆಚ್‌ಸಿ ,ಪ್ರಸನ್, ಹಾಗೂ ಹೆಚ್‌ಸಿ , ಇಮ್ರಾನ್, ಸಿಪಿಸಿ , ಚೇನ್ನೇಶ್ ಕೆ ಹೆಚ್ ರವರೊಂದಿಗೆ ದಿನಾಂಕ 18-03-2023 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಸರಳೆ ಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಗಾಂಜಾವನ್ನು ಸೇವನೆ ಮಾಡಿದಂತ ಆರೋಪದ ಮೇಲೆ ಅಪೂರ್ವ ರಾಯ್ (20), ಪುನೀತ್ (19), ಅಖಿಲ್ ಮಿಶ್ರಾ (21) ,ಶಿಬಾಶೀಸ್ ದಾಸ್ (20) , ಯಶ್ (21) ಎಂಬವರನ್ನು ಹಾಗೂ ಮಣಿಪಾಲ ದ ಡಿ.ಸಿ. ಆಫೀಸ್ ರಸ್ತೆ ಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಅನುಜ ಉಮೇಶ (18) ಎಂಬವನನ್ನು ಬಂಧಿಸಿ ವಶಕ್ಕೆ ಪಡೆದು ಠಾಣೆಗೆ ಕರೆತಂದು ಅವರೆಲ್ಲರನ್ನೂ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ. ಆರೋಪಿಗಳೆಲ್ಲರೂ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 24/03/2023 ರಂದು ದೃಢಪತ್ರವನ್ನು ನೀಡಿದ್ದು ,ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27 (ಬಿ) ಎನ್‌ಡಿಪಿಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.