ಕೋಟ: ದಿನಾಂಕ:23-03-2023,(ಹಾಯ್ ಉಡುಪಿ ನ್ಯೂಸ್) ಗುಂಡ್ಮಿ ಗ್ರಾಮದ ಸಾಸ್ತಾನ ಸೇತುವೆ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನೋರ್ವನನ್ನು ಕೋಟ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 18/03/2023 ರಂದು ಮಧು ಬಿ.ಇ, ಪೊಲೀಸ್ ಉಪನಿರೀಕ್ಷಕರು(ಕಾ ಮತ್ತು ಸು), ಕೋಟ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ( ಕಾನೂನು ಸುವ್ಯವಸ್ಥೆ ) ಮಧು ಬಿ.ಇ, ಇವರು ಠಾಣೆಯ ಸಿಬ್ಬಂದಿಯವರೊಂದಿಗೆ ದಿನಾಂಕ :18-03-2023 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಸೇತುವೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕನು ಗಾಂಜಾ ಎಂಬ ಮಾದಕ ದ್ರವ್ಯವನ್ನು ಸೇವನೆ ಮಾಡಿ ಅಮಲಿನಲ್ಲಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ದೊರೆತಂತೆ ಕೂಡಲೇ ಸಾಸ್ತಾನ ಸೇತುವೆಯ ಬಳಿ ಹೋಗಿ ಪೊಲೀಸರು ನೋಡಿದಾಗ ಗಾಂಜಾ ಅಮಲಿನಲ್ಲಿ ತೂರಾಡುತ್ತಿದ್ದ ಆಪಾದಿತ ಚೇತನ್ ಕುಂದರ್ (25) ಎಂಬಾತನನ್ನು ವಶಕ್ಕೆ ಪಡೆದುಕೊಂಡು ಗಾಂಜಾ ಸೇವಿಸಿರುವ ಬಗ್ಗೆ ಫೊರೆನ್ಸಿಕ್ ಮೆಡಿಸಿನ್ ವಿಭಾಗ, ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಾರೆ. ದಿನಾಂಕ 21/03/2023 ರಂದು ತಜ್ಞ ವರದಿಯಲ್ಲಿ ಆಪಾದಿತನಾದ ಚೇತನ್ ಕುಂದರ್ ಗಾಂಜಾ ಸೇವಿಸಿರುವುದು ಧೃಡಪಟ್ಟಿದ್ದು ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ