- ಮಣಿಪಾಲ: ದಿನಾಂಕ 23 /03/2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಸಾರ್ವಜನಿಕ ಸ್ಥಳವೊಂದರಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಐವರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು ದಿನಾಂಕ 17-03-2023 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ಅಪಾರ್ಟ್ ಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಾದಕವಸ್ತು ಗಾಂಜಾ ಸೇವನೆ ಮಾಡಿದಂತೆ ವರ್ತಿಸುತ್ತಿದ್ದ ನಿಖಿಲ್ .ಎಮ್ (22) , ತನ್ವೀರ್ ರೆಡ್ಡಿ (20), ಶರಣ್ ಶೆಟ್ಟಿ (22), ರಾಹುಲ್ ಸೀಮಾ (21) ,ಜಿ.ತುಷಾರ್ (21) ಎಂಬವರನ್ನು ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಆರೋಪಿಗಳು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ 22̤/03/2023 ರಂದು ದೃಢಪತ್ರವನ್ನು ನೀಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.