ಸೂರತ್: ದಿನಾಂಕ:22-03-2023(ಹಾಯ್ ಉಡುಪಿ ನ್ಯೂಸ್) ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ನ್ಯಾಷನಲ್ ಕೌನ್ಸಿಲ್ ಸಭೆಯು ಸೂರತ್ ನಲ್ಲಿ ನಡೆಯಿತು.
ಗುಜರಾತ್ ರಾಜ್ಯಪಾಲರಾದ ಶ್ರೀ ದೇವವ್ರತ್ ಆಚಾರ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀ ಕೆ.ಬಿ.ಪಂಡಿತ್ ( ಹರಿಯಾಣ ರಾಜ್ಯದ ಕರ್ನಾಲ್) ಮತ್ತು ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀ ಮುರುಗೇಶ್ ಶಿವಪೂಜಿ (ಕರ್ನಾಟಕದ ಬೆಳಗಾವಿ) ಗುಜರಾತ್ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಗಣಪತ ಪಾಂಡ್ಯ ಮತ್ತು ಉಪಾಧ್ಯಕ್ಷ ಶ್ರೀ ಚೌಹಾಣ್, ಸೂರತ್ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ನಿರ್ಜಾ ಮತ್ತು ಸೂರತ್ ಜಿಲ್ಲೆಯ ಕಲೆಕ್ಟರ್ ಉಪಸ್ಥಿತರಿದ್ದರು.
ಎರಡು ದಿನಗಳ ಕಾಲ ನಡೆದ ನ್ಯಾಷನಲ್ ಕೌನ್ಸಿಲ್ ಮೀಟಿಂಗ್ ನಲ್ಲಿ ಪತ್ರಿಕಾ ರಂಗದ ಪ್ರಸ್ತುತ ವಿದ್ಯಮಾನಗಳ ಮತ್ತು ಮುಖ್ಯವಾಗಿ ಎಲ್ಲೆಡೆ ಸಾರ್ವತ್ರಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಾಮಾಜಿಕ ಜಾಲತಾಣಗಳ ಕುರಿತು ಗಂಭೀರವಾದ ಚರ್ಚೆ ನಡೆಯಿತು.
ಪತ್ರಿಕಾ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಅತಿಯಾದ ಸ್ವೇಚ್ಛಾಚಾರದ ಕುರಿತು ಸಹ ಸಭೆಯು ಕಳವಳ ವ್ಯಕ್ತಪಡಿಸಿತು.ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಪ್ರತಿನಿಧಿಗಳು ತಮ್ಮ ತಮ್ಮ ವಿಚಾರಗಳನ್ನು ಮಂಡಿಸಿದರು.