Spread the love

ಮಣಿಪಾಲ: ದಿನಾಂಕ: 22-03-2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಮಾಧವ ನಗರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ರುಕ್ಮಾ ನಾಯ್ಕ್ ಅವರಿಗೆ ದಿನಾಂಕ 20/03/2023 ರಂದು ಉಡುಪಿ ತಾಲೂಕು ಮಣಿಪಾಲ ಶಿವಳ್ಳಿ ಗ್ರಾಮದ ಮಾದವ ನಗರ ಟೆಂಪೋ ಸ್ಟ್ಯಾಂಡ್‌ ಬಳಿ ವ್ಯಕ್ತಿ ಯೋರ್ವ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ಕೂಡಲೇ ದಾಳಿ ನಡೆಸಿ ಆರೋಪಿ ಮೆಹಬೂಬ್‌ (24),ವಿಳಾಸ:‌ಅಂಗನವಾಡಿ ಹತ್ತಿರ, ಅಸೂಕಿ ಗ್ರಾಮ ರೋಣಾ ತಾಲೂಕು ಗದಗ ಜಿಲ್ಲೆ.  ಪ್ರಸ್ತುತ ವಾಸ: ಆಂತೋನಿರವರ ಬಾಡಿಗೆ ಮನೆ, ಮಣಿಪಾಲ ಟೈಗರ್‌ ಸರ್ಕಲ್‌ ಶಿವಳ್ಳಿ ಗ್ರಾಮ ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದು ಹಾಗೂ ಆರೋಪಿ ಬಳಸುತ್ತಿದ್ದ ಮಟ್ಕಾ ಚೀಟಿ, ಬಾಲ್‌ ಪೆನ್‌, ನಗದು ರೂಪಾಯಿ 720/-ರೂಪಾಯಿಗಳನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..  

error: No Copying!