Spread the love

ಕಾರ್ಕಳ: ದಿನಾಂಕ 16-03-2023(ಹಾಯ್ ಉಡುಪಿ ನ್ಯೂಸ್) ಬೋಳ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌  ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ತೇಜಸ್ವಿ ಇವರಿಗೆ ದಿನಾಂಕ 15-03-2023 ರಂದು ಕಾರ್ಕಳ ತಾಲೂಕು  ಬೋಳ ಗ್ರಾಮದ ಬೋಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಬಳಿ ಹಾದು ಹೋಗುವ ಮೇಲಂಗಡಿ ಸಾರ್ವಜನಿಕ ರಸ್ತೆ ಬದಿ ಸಾರ್ವಜನಿಕ ಸ್ಥಳದಲ್ಲಿ  ಮಟ್ಕಾ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಠಾಣೆಯ ಸಿಬ್ಬಂದಿಗಳೊಂದಿಗೆ ಕೂಡಲೇ ದಾಳಿ ನಡೆಸಿ  ಆರೋಪಿ ಪ್ರವೀಣ್ (27) ವಾಸ: ಬಪ್ಪಗೋಳಿ, ನಿಟ್ಟೆ ದರ್ಖಾಸು ಮನೆ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಎಂಬಾತನನ್ನು ಬಂಧಿಸಿ ವಶಕ್ಕೆ  ಪಡೆದು ಆರೋಪಿ ಪ್ರವೀಣ್ ನ  ವಶದಲ್ಲಿದ್ದ ಮಟ್ಕಾ ಜುಗಾರಿ  ಆಟದಿಂದ  ಸಂಗ್ರಹಿಸಿದ  ನಗದು ರೂಪಾಯಿ 1840/- , ಮಟ್ಕಾ ಬರೆದ ಚೀಟಿ ಮತ್ತು ಹಸಿರು ಬಣ್ಣದ ಬಾಲ್‌ಪೆನ್‌-01 ನ್ನು  ಸ್ವಾಧೀನಪಡಿಸಿ ಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!