Spread the love

ಶಂಕರನಾರಾಯಣ: ದಿನಾಂಕ 16-03-2023(ಹಾಯ್ ಉಡುಪಿ ನ್ಯೂಸ್) ಒಣಗಲು ಹಾಕಿದ ಅಡಿಕೆ ಯನ್ನು ಕಳ್ಳತನ ನಡೆಸಲು ಪ್ರಯತ್ನಿಸಿದವರ ಮೇಲೆ ಪೊಲೀಸರಿಗೆ ದೂರು ನೀಡಿದ ಘಟನೆ ಹಳ್ಳಿ ಹೊಳೆಯಲ್ಲಿ ನಡೆದಿದೆ.

ದಿನಾಂಕ  14/03/2023 ರಂದು ಧನಂಜಯ ಚಾತ್ರ (54)  ವಾಸ, ಕಲ್ಸಂಕ   ಹಳ್ಳಿಹೊಳೆ ಗ್ರಾಮ ಬೈಂದೂರು ಇವರ  ಮನೆಯ  ಬಳಿ ಖಾಲಿ ಜಾಗದಲ್ಲಿ ಒಣಗಲು ಹಾಕಿದ  ಸುಮಾರು 12,000 ರೂಪಾಯಿ ಮೌಲ್ಯದ 16 ಕೆ.ಜಿ ಸಿಪ್ಪೆ ಅಡಿಕೆಯನ್ನು  ಆರೋಪಿಗಳು ಚೀಲದಲ್ಲಿ ಹಾಕಿ  ಕಳವು ಮಾಡಿಕೊಂಡು ಸಾಗಾಟ  ಮಾಡಲು  ಕೆಎ-20 ಇಕೆ- 3069 ನೇ ನಂಬ್ರದ ಸ್ಕೂಟಿಯಲ್ಲಿ ಇಟ್ಟಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದು ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!