Spread the love

ಮಲ್ಪೆ: ದಿನಾಂಕ 16/03/2023 (ಹಾಯ್ ಉಡುಪಿ ನ್ಯೂಸ್) ಬಾಪು ತೋಟದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯೋರ್ವನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ, ಅವರು ದಿನಾಂಕ 15-03-2023 ರಂದು ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬಾಪುತೋಟ ಬೋಟ್‌  ಕಚ್ಚೆರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ಆಡಿಸುತ್ತಿರುವುದಾಗಿ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ ಕೂಡಲೇ ದಾಳಿ ನಡೆಸಿದಾಗ ಮಟ್ಕಾಜುಗಾರಿ ಆಟ ಆಡುತ್ತಿದ್ದವರು ಓಡಿ ಹೋಗಿದ್ದು ಅವರಲ್ಲಿ ಮಟ್ಕಾ ಜುಗಾರಿಗೆ   ಚೀಟಿ ಪಡೆದು ಹಣ ಸಂಗ್ರಹಿಸುತ್ತಿದ್ದವನ್ನು ಪೊಲೀಸರು ಬಂಧಿಸಿ ವಿಚಾರಿಸಿದಾಗ ತನ್ನ ಹೆಸರು ಸಂತೋಷ್‌ ಪೂಜಾರಿ (49), ವಾಸ: ಅಲಂಗಾರು ಹೋಳಿಂಜೆ ಪೆರ್ಡೂರು ಪೆರ್ಡೂರು ಗ್ರಾಮ ಎಂದು ತಿಳಿಸಿದ್ದು,  ಆತ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ  ಒಟ್ಟು 1650/- ರೂಪಾಯಿ, ಮಟ್ಕಾ ಚೀಟಿ-1 ಹಾಗೂ ಬಾಲ್ ಪೆನ್ನು -1 ನ್ನು  ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

error: No Copying!