Spread the love

ಕಾಫು: ದಿನಾಂಕ 15-03-2023( ಹಾಯ್ ಉಡುಪಿ ನ್ಯೂಸ್) ಉದ್ಯಾವರದ ಜಯಲಕ್ಷ್ಮೀ ಬಟ್ಟೆ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಕಳ್ಳತನ ನಡೆದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.

ದಿನಾಂಕ 15/03/2023 ರಂದು ಮಧ್ಯ ರಾತ್ರಿಯ ನಂತರ ಯಾರೋ ಕಳ್ಳರು ಯು .ವೀರೇಂದ್ರ ಹೆಗ್ಡೆ (49) ವಾಸ: ಮೇನೇಜಿಂಗ್ ಪಾರ್ಟ್ನ ರ್, ಜಯಲಕ್ಷ್ಮೀ ಬಟ್ಟೆ ಅಂಗಡಿ ಉದ್ಯಾವರ, ಉದ್ಯಾವರ ಇವರು ಮೇನೇಜಿಂಗ್ ಪಾರ್ಟ್ನರ್ ಆಗಿ ನಡೆಸಿಕೊಂಡಿರುವ  ಉದ್ಯಾವರ ಗ್ರಾಮದ ಉದ್ಯಾವರ ಜಯಲಕ್ಷ್ಮೀ ಬಟ್ಟೆ ಅಂಗಡಿಯ ನೆಲಮಹಡಿಯ ವಾಶ್ ರೂಂ ಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನ್‌ ಅನ್ನು ಕಿತ್ತು ಯಾರೋ ಕಳ್ಳರು ಅದರ ಮೂಲಕ ಬಟ್ಟೆ ಅಂಗಡಿಗೆ ಒಳಪ್ರವೇಶಿಸಿ ಅಂಗಡಿಯ ನೆಲಮಹಡಿಯ ಕ್ಯಾಶ್ ಕೌಂಟರ್‌ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡು ಬಳಿಕ ಮಹಡಿಯ ಕಛೇರಿಗೆ ಬಂದು ಅಲ್ಲಿನ ಪಿಂಗರ್ ಪ್ರಿಂಟ್ ಇರುವ ಸೇಫ್ ಲಾಕರ್‌ನ ಕೀಯನ್ನು ತಂದು ಕಛೇರಿಯ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ ಹಣದ ಸೇಫ್ ಲಾಕರ್ ಕೀ ತೆಗೆದು ಅದರ ಮೂಲಕ ಹಣವಿಟ್ಟಿದ್ದ ಇನ್ನೊಂದು ಸೇಫ್ ಲಾಕರ್‌ ಅನ್ನು ತೆರೆದು ಅದರಲ್ಲಿದ್ದ  60 ಲಕ್ಷ ರೂಪಾಯಿ ನಗದು ಹಣವನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ವೀರೇಂದ್ರ ಹೆಗ್ಡೆ ಯವರು ನೀಡಿದ ದೂರಿನಂತೆ ಕಾಫು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!