- ಕುಂದಾಪುರ: ದಿನಾಂಕ:15-03-2023(ಹಾಯ್ ಉಡುಪಿ ನ್ಯೂಸ್) ವಾಲ್ತೂರು ಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
- ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪವನ್ ನಾಯಕ್ ಇವರು ದಿನಾಂಕ 14-03-2023ರಂದು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ವಾಲ್ತೂರು –ಮುಂಬಾರು ಶಾಲೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ಪೊಲೀಸರು ತೆರಳಿ ನೋಡಿದಾಗ ಶಾಲೆ ಮುಂದೆ ತನ್ನಲ್ಲಿದ್ದ ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ ಮದ್ಯದ ಪ್ಯಾಕೆಟ್‌ಗಳನ್ನು ಸ್ಥಳದಲ್ಲಿ ಸೇರಿದವರಿಗೆ ನೀಡಿ ಅವರಿಂದ ಹಣ ಪಡೆಯುತ್ತಿದ್ದ ನಾಗರಾಜ ಶೆಟ್ಟಿ (58), ವಾಸ:ಕಾವ್ರಾಡಿ ವಾಲ್ತೂರು ಕಾವ್ರಾಡಿ ಗ್ರಾಮ ಕುಂದಾಪುರ ತಾಲೂಕು ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತಾನು ಮದ್ಯವನ್ನು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನಲ್ಲಿದ್ದ ಪ್ಲಾಸ್ಟಿಕ್‌ಕೈ ಚೀಲ ಹಾಗೂ ಅದರಲ್ಲಿದ್ದ Original Choice ನ 90 ML ನ 22 ಟೆಟ್ರಾ ಪ್ಯಾಕೆಟ್‌ಮತ್ತು MYSORE LANCER 90 ML ನ 6 ಟೆಟ್ರಾ ಪ್ಯಾಕ್ (ಒಟ್ಟು 2520 ML ಮದ್ಯ ಮೌಲ್ಯ ರೂಪಾಯಿ 980/-) ಹಾಗೂ ಆರೋಪಿಯು ಮದ್ಯ ಮಾರಾಟದಿಂದ ಸಂಗ್ರಹಿಸಿದ ಹಣ ಎಂಬುದಾಗಿ ತಿಳಿಸಿ ಹಾಜರು ಪಡಿಸಿದ – 480/- ರೂಪಾಯಿಯನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 32, 34 KE ACT ರಂತೆ ಪ್ರಕರಣ ದಾಖಲಾಗಿರುತ್ತದೆ .