ಉಡುಪಿ: ದಿನಾಂಕ:15-03-2023 (ಹಾಯ್ ಉಡುಪಿ ನ್ಯೂಸ್) ವ್ಯಕ್ತಿ ಯೋರ್ವರು ವಾಟ್ಸ್ ಆ್ಯಪ್ ಮೆಸೇಜ್ ಅನ್ನು ನಂಬಿ ವೀಸಾ ಪಡೆಯಲೆಂದು ಯಾರೋ ವಂಚಕ ರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆ ಮಾಡಿ ಇದೀಗ ಮೋಸ ಹೋಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಯರಾಜ್ ಆಚಾರ್ಯ ಎಂಬವರು ವಿದೇಶದಲ್ಲಿ ಉದ್ಯೋಗಕ್ಕಾಗಿ ವಾಟ್ಸ್ ಅಪ್ ನಲ್ಲಿ ಕಂಡು ಬಂದ ವೀಸಾ ಮಾಡಿಕೊಡುವ ಪ್ರಕಟಣೆಯನ್ನು ಓದಿ ಅದರಲ್ಲಿದ್ದ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದ್ದು ಆತನು ತಾನು ಪಾಸ್‌ಪೋರ್ಟ್ ಮತ್ತು ವೀಸಾ ಮಾಡಿಕೊಡುವ ಏಜೆಂಟ್ ಎಂದು ಜಯರಾಜ್ ಆಚಾರ್ಯರನ್ನು ನಂಬಿಸಿ, ಆನ್ ಲೈನ್ ಮುಖೇನ ಇಂಟರ್ ವೀವ್ ನಡೆಸಿ, ವೀಸಾ ಮಾಡಿಸಲು ಚಾರ್ಜ್ ಮತ್ತು ಇನ್ನಿತರ ಖರ್ಚುಗಳ ನೆಪ ಹೇಳಿ, ದಿನಾಂಕ 09.01.2023 ರಿಂದ ದಿನಾಂಕ 08.02.2023 ರವರೆಗೆ ಒಟ್ಟು ರೂ. 6,90,343/- ಹಣವನ್ನು ಜಯರಾಜ್ ಆಚಾರ್ಯರಿಂದ ಆರೋಪಿಗಳ ವಿವಿಧ ಖಾತೆಗೆ ಆನ್‌ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ವೀಸಾವನ್ನು ನೀಡದೇ ಪಡೆದ ಹಣವನ್ನೂ ವಾಪಾಸು ನೀಡದೇ ಮೋಸ ಮಾಡಿರುತ್ತಾರೆ ಎಂದು ಜಯರಾಜ್ ಆಚಾರ್ಯರವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ 66(D) ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿರುತ್ತದೆ.