- ಉಡುಪಿ: ದಿನಾಂಕ 14-03-2023(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿ ಕುಕ್ಕಿಕಟ್ಟೆಯಲ್ಲಿ ನಡೆದಿದೆ.
- ದಿನಾಂಕ: 13.03.2023 ರಂದು ಉಡುಪಿ ತಾಲೂಕು ಕುಕ್ಕಿಕಟ್ಟೆ ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಇಮ್ರಾನ್ ಖಾನ್ ಎಂಬಾತನನ್ನು ರೌಂಡ್ಸ್ ಕರ್ತವ್ಯದಲ್ಲಿದ್ದ ಸೆನ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ನಾಗೇಶ್, ಪ್ರವೀಣ್ ಮತ್ತು ಸಂಜಯ್ ರವರು ಬೆಳಿಗ್ಗೆ ವಶಕ್ಕೆ ಪಡೆದು , ಸೆನ್ ಅಪರಾಧ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ಸುನಿಲ್ ಕುಮಾರ್ ರವರ ಮುಂದೆ ಹಾಜರು ಪಡಿಸಿದ್ದು ಅವರ ಸೂಚನೆಯ ಮೇರೆಗೆ ಇಮ್ರಾನ್ ನನ್ನು ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 14.03.2023 ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ಆರೋಪಿ ಇಮ್ರಾನ್ ಖಾನ್ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಆತನ ವಿರುದ್ಧ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ 27 (b) ಎನ್.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.