Spread the love
  • ಉಡುಪಿ: ದಿನಾಂಕ 14-03-2023(ಹಾಯ್ ಉಡುಪಿ ನ್ಯೂಸ್) ಉಡುಪಿ ನಗರದ ಕಲ್ಸಂಕ ಬಳಿ ಇರುವ ಕನಕಮಾಲ್ ಎಂಬ ಪಾಳು ಬಿದ್ದಿರುವ ಕಟ್ಟಡದಲ್ಲಿ ಅಪರಿಚಿತ ಯುವಕನೋರ್ವನ ಶವಪತ್ತೆಯಾಗಿದೆ.
  • ದಿನಾಂಕ 13/03/2023 ರಂದು ಉಡುಪಿ ಕಲ್ಸಂಕ ಜಂಕ್ಷನ್‌ ಬಳಿಯ ಕನಕಮಾಲ್‌ ನ ಪಾಳು ಬಿದ್ದ ಕಟ್ಟಡದಲ್ಲಿ ಓರ್ವ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ. ನೆಲ ಮಹಡಿಯಲ್ಲಿ ಅಂದಾಜು 30 ರಿಂದ 35 ವರ್ಷ ಪ್ರಾಯದ ಅಪರಿಚಿತ ಯುವಕನ ಮೃತದೇಹ ನೆಲದಲ್ಲಿ ರಕ್ತಸಿಕ್ತವಾಗಿ ಮುಖ ಕವುಚಾಗಿ ಬಿದ್ದಿದ್ದು, ಯುವಕನ ಹೆಸರು ವಿಳಾಸ ವಿವರಗಳು ತಿಳಿದು ಬಂದಿರುವುದಿಲ್ಲ ಎನ್ನಲಾಗಿದೆ. ಆತನ ಎಡಭುಜದಲ್ಲಿ ಹಾಗೂ ಕಿಬ್ಬೊಟ್ಟೆಯಲ್ಲಿ ಗಾಯವಿದ್ದು, ಎಡಗಣ್ಣಿನ ಬಳಿ ಜಜ್ಜಿದ ಗಾಯವಿದ್ದು, ಕಿವಿಯಿಂದ ರಕ್ತ ಸೋರಿರುತ್ತದೆ. ಮೃತ ಯುವಕನು ಎತ್ತರದಿಂದ ಬಿದ್ದೊ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  
error: No Copying!