Spread the love

ಕಾರ್ಕಳ: ದಿನಾಂಕ 14-03-2023 (ಹಾಯ್ ಉಡುಪಿ ನ್ಯೂಸ್) ಅಂತರ್ಜಾತೀಯ ವಿವಾಹವಾದ ಬಗ್ಗೆ ದ್ವೇಷದಿಂದ ಗಂಡನ ಸಂಬಂಧಿ ಮನೆಗೆ ಬಂದು ಜೀವ ಬೆದರಿಕೆ ಹಾಕಿರುವ ಬಗ್ಗೆ ಮಹಿಳೆಯೋರ್ವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ವೀಣಾ (42), ಗಂಡ: ಪೀಟರ್ ಡಿ ಅಲ್ಮೇಡಾ, ವಾಸ: ಗಿಪ್ಟ್ ಆಫ್ ಗಾಡ್, ಕೊಯಿಲಬೆಟ್ಟು ಮನೆ, ತೆಳ್ಳಾರ್, ದುರ್ಗಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬವರು ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಮಡಿ ನಿವಾಸಿ  ಪೀಟರ್ ಡಿ ಅಲ್ಮೇಡಾ ಇವರನ್ನು ವಿವಾಹವಾದ ಬಗ್ಗೆ ದ್ವೇಷದಿಂದ ಪೀಟರ್ ಡಿ ಅಲ್ಮೇಡಾರವರ ದೊಡ್ಡಮ್ಮನ ಮಗ ರಿಚಾರ್ಡ್ ಡಿ ಅಲ್ಮೇಡಾ ಎಂಬವರು ವೀಣಾರವರು ವಾಸವಿರುವ ಕಾರ್ಕಳ ತಾಲೂಕು, ದುರ್ಗಾ ಗ್ರಾಮದ ತೆಳ್ಳಾರ್ ಕೊಯಿಲಬೆಟ್ಟು ಎಂಬಲ್ಲಿಯ ಮನೆಯ ಬಳಿಗೆ ದಿನಾಂಕ 09/03/2023 ರಂದು ಬೆಳಗ್ಗೆ ಕಾರು ನಂಬ್ರ KA-20-Z-6487 ನೇಯದರಲ್ಲಿ ಬಂದು ಸುತ್ತಮುತ್ತಲಿನವರಿಗೆ ಕೇಳಿಸುವಂತೆ  ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿ ಕಾರಿನಲ್ಲಿ ತೆರಳಿರುತ್ತಾನೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸರಿಗೆ ‌ ವೀಣಾರವರು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .

error: No Copying!