![](https://haiudupi.com/wp-content/uploads/2023/03/download-1.png)
ಪಡುಬಿದ್ರಿ: ದಿನಾಂಕ 13-03-2023 (ಹಾಯ್ ಉಡುಪಿ ನ್ಯೂಸ್) ಎಕ್ಸ್ ಪ್ರೆಸ್ ಬಸ್ಸಿನ ಟೈಮಿಂಗ್ ವಿವಾದ ಮಾತಿಗೆ ಮಾತು ಬೆಳೆದು ಬಸ್ ಸಿಬ್ಬಂದಿ ಹಾಗೂ ಟೈಂ ಕೀಪರ್ ಹೊಡೆದಾಡಿ ಕೊಂಡು ಪೊಲೀಸರಿಗೆ ದೂರು,ಪ್ರತಿ ದೂರು ನೀಡಿದ ಘಟನೆ ಪಡುಬಿದ್ರಿ ಯಲ್ಲಿ ನಡೆದಿದೆ.
ಶಮೀಯುಲ್ಲಾ, (45) ವಾಸ: ಪಕೀರ್ಣಕಟ್ಟೆ ಮಸೀದಿಯ ಬಳಿ, ಮಲ್ಲಾರು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಕಾಪುವಿನ ಇಮ್ತಿಯಾಜ್ ಎಂಬವರ KA-20-AB-7677 ನೇ ನಂಬ್ರದ ಗಣೇಶ್ ಹೆಸರಿನ ಮಂಗಳೂರು-ಕುಂದಾಪುರ ಮಾರ್ಗದ ಎಕ್ಸ್‌ಪ್ರೆಸ್‌ಬಸ್ಸಿನ ನಿರ್ವಾಹಕನಾಗಿ ಕಳೆದ 13 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಹನೀಫ್ ಎಂಬವರು ಅದೇ ಬಸ್ಸಿನ ಚಾಲಕರಾಗಿ ಕೆಲಸ ಮಾಡಿಕೊಂಡಿರುತ್ತಾರೆ ಎಂದಿದ್ದಾರೆ. ಎಂದಿನಂತೆ ದಿನಾಂಕ 12/03/2023 ರಂದು ಮಧ್ಯಾಹ್ನ ಕುಂದಾಪುರದಿಂದ ಹೊರಟು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿ ಬಸ್ಸು ನಿಲ್ದಾಣಕ್ಕೆ ಬಂದು ಬಸ್ಸು ಹೊರಡುವ ಸಮಯ ಅಲ್ಲಿನ ಟೈಂ ಕೀಪರ್ ಮಹೇಶ್ ಎಂಬಾತನು ಬಸ್ಸಿನ ಮುಂದೆ ಬಂದು, ಮುಂದೆ ಹೋಗದಂತೆ ತಡೆದಿದ್ದು, ಆಗ ಶಮೀಯುಲ್ಲಾ ರವರು ಆತನನ್ನು ಕೇಳುತ್ತಿದ್ದಾಗ, ಮಹೇಶನು ಶಮೀಯುಲ್ಲಾ ರವರನ್ನು ಉದ್ದೇಶಿಸಿ, ಅವಾಚ್ಯವಾಗಿ ಬೈಯುತ್ತಾ, ಶಮೀಯುಲ್ಲಾ ರವರನ್ನು ದೂಡಿ ಕೈಯಿಂದ ಹೊಡೆದಿರುತ್ತಾನೆ, ಆಗ ಶಮೀಯುಲ್ಲಾ ರವರು ರಸ್ತೆಗೆ ಬಿದ್ದ ಪರಿಣಾಮ ಬಲಕೈ, ಅಂಗೈಗೆ ಗಾಯವಾಗಿರುತ್ತದೆ ಎಂದೂ. ನಂತರ ಶಮೀಯುಲ್ಲಾ ರವರಿಗೆ ಹಾಗೂ ಬಸ್ಸಿನ ಚಾಲಕನಿಗೆ ಮುಂದಕ್ಕೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಮಹೇಶ ಬೆದರಿಕೆ ಹಾಕಿರುತ್ತಾನೆ ಎಂದು ಶಮೀಯುಲ್ಲಾ ಪೊಲೀಸರಿಗೆ ದೂರು ನೀಡಿದ್ದಾರೆ.
ಶಮೀವುಲ್ಲಾ ತನಗೆ ಬೈದು ಹಲ್ಲೆ ಮಾಡಿರುತ್ತಾನೆ ಎಂದು ಮಹೇಶನು ಪ್ರತಿ ದೂರು ಸಲ್ಲಿಸಿರುತ್ತಾನೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ