ಕೋಟ: ದಿನಾಂಕ 11-03-2023(ಹಾಯ್ ಉಡುಪಿ ನ್ಯೂಸ್) ಯಕ್ಷಗಾನ ನೋಡಲು ತೆರಳಿದ್ದ ಯುವಕನನ್ನು ಯಾರೋ ದುಷ್ಕರ್ಮಿಗಳು ಚೂರಿಯಿಂದ ಇರಿದು ಹೋದ ಘಟನೆ ಸಾಲಿಗ್ರಾಮ ದಲ್ಲಿ ನಡೆದಿದೆ.
ಗಣೇಶ್ ಪೂಜಾರಿ (35) , ಗಾವಳಿ ಮನೆ, ಕೊರವಡಿ, ಕುಂಭಾಶಿ ಗ್ರಾಮ, ಕುಂದಾಪುರ ರವರು ದಿನಾಂಕ 09/03/2023 ರಂದು ಬೆಳಿಗ್ಗೆ 07:00 ಗಂಟೆ ಸಮಯಕ್ಕೆ ಕೆಲಸಕ್ಕೆ ಹೊರಡುವಾಗ ಅವರು ದೂರದ ಸಂಬಂಧಿ ದಯಾನಂದ ಎಂಬುವರು ಬಂದು ತನ್ನ ಭಾವ ಸಂಬಂಧಿ ಸೋಮ ರವರ ಮಗ ಸಂತೋಷ್‌ನು ಸಂಜೆ 7:00 ಗಂಟೆ ವೇಳೆಗೆ ಸಾಸ್ತಾನಕ್ಕೆ ಯಕ್ಷಗಾನ ನೋಡಲು ಅವನ ಸ್ಕೂಟಿಯಲ್ಲಿ ಹೋದವನು ವಾಪಾಸು ಮನೆಗೆ ಬಂದಿರುವುದಿಲ್ಲವಾಗಿ ತಿಳಿಸಿದ್ದು, ನಂತರ ಗಣೇಶ್ ಪೂಜಾರಿ ರವರು ಮತ್ತು ದಯಾನಂದ ಸೇರಿ ಸಂತೋಷ್‌ನನ್ನು ಹುಡುಕಲು ಯಕ್ಷಗಾನ ನಡೆಯುವ ಸ್ಥಳಕ್ಕೆ ಹಾಗೂ ಸಾಲಿಗ್ರಾಮಕ್ಕೆ ಹೋಗಿ ಪರಿಚಯದವರಲ್ಲಿ ವಿಚಾರ ತಿಳಿಸಿ ಹುಡುಕುತ್ತಿದ್ದಾಗ ಸಾಲಿಗ್ರಾಮದ ಹಾಳುಕೋಟೆ ಎಂಬಲ್ಲಿ ಒಬ್ಬ ಬಿದ್ದುಕೊಂಡಿರುವುದಾಗಿಯೂ ಹಾಗೂ ಒಂದು ಬೈಕು ವಿಶ್ವಕರ್ಮ ಸಭಾ ಭವನದ ಬಳಿ ಇರುವುದಾಗಿ ತಿಳಿಸಿದ್ದು, ಅದರಂತೆ ದಿನಾಂಕ 09/03/2023 ರಂದು ಬೆಳಿಗ್ಗೆ ಸುಮಾರು 08:15 ಗಂಟೆ ಸಮಯಕ್ಕೆ ಸಾಲಿಗ್ರಾಮ ಹಾಳುಕೋಟೆ ಎಂಬಲ್ಲಿಗೆ ಹೋಗಿ ನೋಡಿದಾಗ ಯಕ್ಷಗಾನ ಕೇಂದ್ರದ ಎದುರು ಸಂತೋಷ್‌ನು ಬಿದ್ದುಕೊಂಡಿದ್ದು, ಆತನ ಗಲ್ಲ, ಕುತ್ತಿಗೆ, ಕಾಲಿಗೆ ಯಾವುದೋ ಆಯುಧದಿಂದ ಗೀರಿದಂತಹ ತೀವ್ರ ತರದ ರಕ್ತಗಾಯವಾಗಿದ್ದು, ರಕ್ತ ಸೋರುತ್ತಿತ್ತು. ಏನಾಯಿತೆಂದು ಕೇಳಿದಾಗ ಮಾತನಾಡುತ್ತಿರಲಿಲ್ಲ. ಮೋಟಾರು ಸೈಕಲ್ ವಿಶ್ವಕರ್ಮ ಸಭಾ ಭವನದಿಂದ ಸ್ವಲ್ಪ ಮುಂದೆ ರಾ.ಹೆ . 66 ರ ಬಳಿ ನಿಂತಿರುತ್ತದೆ. ಕೂಡಲೇ ಒಂದು ವಾಹನದಲ್ಲಿ ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ . ಸಂತೋಷ್‌ನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಆಯುಧದಿಂದ ಹಲ್ಲೆ ಮಾಡಿ ತೀವ್ರ ತರದ ಗಾಯಗೊಳಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 39/2023 ಕಲಂ: 326 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಗಲ್ಲ, ಕುತ್ತಿಗೆ, ಕಾಲಿಗೆ ಯಾವುದೋ ಆಯುಧದಿಂದ ಗೀರಿದಂತಹ ತೀವ್ರ ತರದ ರಕ್ತಗಾಯವಾಗಿದ್ದು, ರಕ್ತ ಸೋರುತ್ತಿತ್ತು. ಏನಾಯಿತೆಂದು ಕೇಳಿದಾಗ ಮಾತನಾಡುತ್ತಿರಲಿಲ್ಲ. ಮೋಟಾರು ಸೈಕಲ್ ವಿಶ್ವಕರ್ಮ ಸಭಾ ಭವನದಿಂದ ಸ್ವಲ್ಪ ಮುಂದೆ ರಾ.ಹೆ . 66 ರ ಬಳಿ ನಿಂತಿರುತ್ತದೆ. ಕೂಡಲೇ ಸಂತೋಷನನ್ನು ಒಂದು ವಾಹನದಲ್ಲಿ ಕೋಟೇಶ್ವರ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಹಾಗೂ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಸಂತೋಷ್‌ನಿಗೆ ಯಾರೋ ದುಷ್ಕರ್ಮಿಗಳು ಯಾವುದೋ ಆಯುಧದಿಂದ ಹಲ್ಲೆ ಮಾಡಿ ತೀವ್ರ ತರದ ಗಾಯಗೊಳಿಸಿರುತ್ತಾರೆ ಎಂದು ಗಣೇಶ್ ಪೂಜಾರಿ ಯವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದು , ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.