ಕೋಟ: ದಿನಾಂಕ:11-03-2023(ಹಾಯ್ ಉಡುಪಿ ನ್ಯೂಸ್) ನೆರೆಮನೆಯ ಮಹಿಳೆಯೋರ್ವರು ಕ್ರಷಿ ನಾಶ ಮಾಡಿದ್ದಲ್ಲದೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮನ ಶೆಟ್ಟಿ (47) ಗಂಡ: ಭೋಜ ರಾಜ ಶೆಟ್ಟಿ ವಾಸ: ಮಂಡಾಡಿ ಹೋರ್ವರ ಮನೆ ಹೊಂಬಾಡಿ, ಮಂಡಾಡಿ ಗ್ರಾಮ ಕುಂದಾಪುರ ಇವರು ದಿನಾಂಕ 10/03/2023 ರಂದು ಬೆಳಿಗ್ಗೆ 08:00 ಗಂಟೆಗೆ ಮಂಡಾಡಿ ಹೋರ್ವರ ಮನೆ ಹೊಂಬಾಡಿ ಮಂಡಾಡಿ ಗ್ರಾಮದಲ್ಲಿ ತನ್ನ ತೋಟದಲ್ಲಿರುವ ಅಡಿಕೆ ಗಿಡಗಳಿಗೆ ನೀರು ಬಿಡಲು ತೋಟಕ್ಕೆ ಹೋದಾಗ ನೆರೆಮನೆಯ ರಮಣಿ ಶೆಡ್ತಿ ಎಂಬುವವರು ಗಿಡಕ್ಕೆ ಅಳವಡಿಸಿದ ಪೈಪನ್ನು ತುಂಡು ಮಾಡಿ ತೆಗೆದುಕೊಂಡು ಹೋಗಿದ್ದು ಹಾಗೂ ಸ್ಪಿಂಕ್ಲರ್ ಗಳನ್ನು ಕೂಡ ತುಂಡು ಮಾಡಿದ್ದು ಅಂದಾಜು 15000/- ರೂಪಾಯಿ ನಷ್ಟವನ್ನುಂಟು ಮಾಡಿದ್ದಲ್ಲದೇ ಕೆಲವೊಂದು ಅಡಿಕೆ ಗಿಡಗಳನ್ನು ಕಿತ್ತು ಸಾಯಿಸಿರುತ್ತಾರೆ ಹಾಗೂ “ಪೊಲೀಸ್ ಗೆ ಕಂಪ್ಲೆಂಟ್ ಕೊಡು ಏನು ಬೇಕಾದರೂ ಮಾಡಿಕೊ ಎಂಬುವುದಾಗಿ ಅವಾಚ್ಯವಾಗಿ ಬೈದಿದ್ದಲ್ಲದೇ “ನಿನ್ನ ಕೈ ಕಾಲುಗಳನ್ನು ಕಡಿಯುತ್ತೇನೆ,” ಎಂಬುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸುಮನ ಶೆಟ್ಟಿಯವರು ಪೊಲೀಸರಿಗೆ ದೂರು ನೀಡಿದ್ದಾರೆ , ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.