Spread the love

ಶಂಕರನಾರಾಯಣ : ದಿನಾಂಕ 9-03-2023(ಹಾಯ್ ಉಡುಪಿ ನ್ಯೂಸ್) ಸಾರ್ವಜನಿಕರ ಶಾಂತಿ ಭಂಗ ಮಾಡುತ್ತಿದ್ದ ಕಿಡಿಗೇಡಿ ಗಳ ಕ್ರತ್ಯ ವನ್ನು ಪ್ರಶ್ನಿಸಿದ‍ ಯುವಕನಿಗೆ ಕಿಡಿಗೇಡಿ ಗಳು ಹಲ್ಲೆ ಮಾಡಲು ಮುಂದಾಧ ಘಟನೆ ನಡೆದಿದೆ.

ದಿನಾಂಕ 09.03.2023 ರಂದು ಬೆಳಿಗ್ಗೆ ಸುಬ್ರಹ್ಮಣ್ಯ  ಪ್ರಾಯ 26 ವರ್ಷ   ವಾಸ,  ಉಳ್ಳೂರು  74 ಗ್ರಾಮ ಇವರು ಕುಂದಾಪುರ  ತಾಲೂಕಿನ  ಸಿದ್ದಾಪುರ ಗ್ರಾಮದ  ಸಿದ್ದಾಪುರ ಬಸ್ಸು ನಿಲ್ದಾಣದ ಬಳಿ ಇರುವಾಗ ಬಸ್ಸು ನಿಲ್ದಾಣದ ಬಳಿ  ಕೆಎ. 20 ಇಝಡ್, 3451 ನೇ  ನಂಬ್ರದ ಮೋಟಾರ್  ಸೈಕಲ್  ಸವಾರರು ಮೋಟಾರ್ ಸೈಕಲ್ ನಿಲ್ಲಿಸಿಕೊಂಡು  ವಿಪರೀತವಾಗಿ ಹಾರ್ನ್ ಹಾಕಿ ಹಾಗೂ   ಸಾರ್ವಜನಿಕರಿಗೆ ತೊಂದರೆ  ನೀಡುತ್ತಿದ್ದು,  ಈ ಬಗ್ಗೆ ಸುಬ್ರಮಣ್ಯ ರವರು ವಿಚಾರಿಸಿದಾಗ ಆರೋಪಿಗಳು ಜಗಳ ಮಾಡುವ ಉದ್ದೇಶದಿಂದ ಮೋಟಾರ್  ಸೈಕಲ್‌‌ನ್ನು ಸುಬ್ರಮಣ್ಯ ರಿಗೆ ಅಕ್ರಮವಾಗಿ  ಅಡ್ಡನಿಲ್ಲಿಸಿ   ಕೆಟ್ಟ ಶಬ್ದಗಳಿಂದ ಬೈದು   ನಮ್ಮನ್ನು  ಕೇಳಲು ನೀನು ಯಾರೂ ಎಂದು  ಹೇಳಿ  ಬೆದರಿಕೆ  ಹಾಕಿ   ಕೈಯಿಂದ ಹೊಡೆಯಲು ಬಂದಿರುತ್ತಾರೆ ಎಂದು ಸುಬ್ರಮಣ್ಯ ರವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ  ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.    

error: No Copying!