- ಬೈಂದೂರು: ದಿನಾಂಕ:9-03-2023(ಹಾಯ್ ಉಡುಪಿ ನ್ಯೂಸ್) ಬೈಂದೂರು, ಯಡ್ತರೆ ಗ್ರಾಮದಲ್ಲಿ ವ್ಯಕ್ತಿ ಯೋರ್ವ ಬಾಟಲಿಯಿಂದ ಹಲ್ಲೆ ನಡೆಸಲು ಬಂದಿರುವ ಬಗ್ಗೆ ಗುರುರಾಜ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.
- ಗುರುರಾಜ (41), ವಾಸ: ಕಲ್ಲುಕಂಟದ ಮನೆ ಪಡುವರಿ ಸೋಮೇಶ್ವರ ಪಡುವರಿ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 07/03/2023 ರಂದು ಬೆಳಿಗ್ಗೆ 11:00 ಗಂಟೆಗೆ ಯಡ್ತರೆ ಗ್ರಾಮದ ಬೈಂದೂರು ಹೊಸ ತಹಶಿಲ್ದಾರರ ಕಚೇರಿ ಹತ್ತಿರದ ಹೋಟೇಲ್ ಮಂಗೇಶ್ ಶ್ಯಾನುಭಾಗ್ ಬಳಿ ಚಹಾ ಕುಡಿದು ಹೊರಗೆ ಬರುತ್ತಿರುವ ಸಮಯ ಸುಬ್ರಹ್ಮಣ್ಯ ಬಿಜೂರು ಎಂಬಾತ ಗುರುರಾಜರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ಬಾಜಲ್ ಬಾಟಲಿಯಿಂದ ಹಲ್ಲೆ ಮಾಡಲು ಬಂದಿದ್ದು ಗುರುರಾಜರು ವಿಚಾರಿಸಿದಾಗ “ನೀನು ಉದ್ಯಮಿಯ ಜೊತೆ ಇದ್ದೀಯಾ , ಅವರನ್ನು ಮತ್ತು ನಿನ್ನನ್ನು ಅಂತ್ಯ ಕಾಣಿಸುತ್ತೇನೆ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ “ ಎಂದು ಹೇಳಿ ಹಲ್ಲೆ ಮಾಡಿರುತ್ತಾನೆ ಎಂದು ದೂರಿದ್ದಾರೆ. ಆಗ ಅಲ್ಲಿದ್ದ ರಾಜೇಶ್ ಹೋಬಳಿದಾರ್, ಪ್ರಕಾಶ ಹೇನುಬೇರ್ ಹಾಗೂ ಇತರರು ಆತನನ್ನು ಹಿಡಿದುಕೊಂಡು ತಪ್ಪಿಸಿದ್ದು , ಆಗ ಆತನು ಗುರುರಾಜರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಪೊಲೀಸರಿಗೆ ದೂರಿದ್ದಾರೆ. ನಂತರ ವಾಟ್ಸಾಪ್ ನಲ್ಲಿ ಗುರುರಾಜ್ ರವರ ಬಗ್ಗೆ ಅವಹೇಳನಕಾರಿ ಬರೆದು ಹಾಕಿರುತ್ತಾನೆ. ಅಲ್ಲದೇ ಸುಬ್ರಮಣ್ಯ ಬಿಜೂರು ಕೆಲವು ದಿನಗಳ ಹಿಂದೆ ದಾರಿಯಲ್ಲಿ ಸಿಕ್ಕಿದಾಗ ಒಂದು ಕಟ್ಟಡ ಕಾಮಗಾರಿಯ ಬಗ್ಗೆ ಹೇಳಿದ್ದು ಇದರ ಬಗ್ಗೆ ಗುರುರಾಜರು ತಲೆಕೆಡಿಸಿಕೊಳ್ಳದೇ ಇದ್ದ ಕಾರಣ ಸುಬ್ರಮಣ್ಯ ಹಲ್ಲೆಗೆ ಬಂದಿರುತ್ತಾನೆ ಎಂದು ಗುರುರಾಜ್ರ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.