Spread the love

ಮಲ್ಪೆ: ದಿನಾಂಕ:8-03-2023(ಹಾಯ್ ಉಡುಪಿ ನ್ಯೂಸ್) ಮಲ್ಪೆ ಯ ಇಂಜಿನೀಯರಿಂಗ್ ಶಾಪ್ ಒಂದರ ಹೊರಗೆ ರಿಪೇರಿಗೆಂದು ಇಟ್ಟಿದ್ದ ಬೋಟ್ ಒಂದರ ಫ್ಯಾನನ್ನು ಯಾರೋ ಕಳ್ಳರು ರಾತ್ರಿ ಕದ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.

ದಯಾನಂದ  ಕಾಂಚನ್(‌49) ವಾಸ: ಹನುಮಾನ ನಗರ  ಮಲ್ಪೆ ,ಕೊಡವೂರು ಗ್ರಾಮ ಇವರ  ಮಲ್ಪೆಯಲ್ಲಿರುವ   ರಾಜೇಶ್ವರಿ ಇಂಜೀನಿಯರಿಂಗ್‌  ವರ್ಕ   ಶಾಪ್‌ನ     ಹೊರಗಡೆ ಹರೀಶ್ ಎಂಬವರು ತನ್ನ ಮಾಲೀಕತ್ವದ ಶಿವಜ್ಯೋತಿ ಬೋಟಿನ ಪ್ಯಾನನ್ನು ರಿಪೇರಿಗೆ ಇಟ್ಟು ಹೋಗಿದ್ದು   ದಿನಾಂಕ   27/02/2023 ರಂದು  ಬೆಳಿಗ್ಗೆ 8:30 ಗಂಟೆಗೆ ಬಂದು  ನೋಡುವಾಗ    ಪ್ಯಾನ್   ವರ್ಕ್   ಶಾಪ್‌ನ      ಹೊರಗಡೆ ಇಲ್ಲದೆ  ಇದ್ದು  ದಯಾನಂದ ಕಾಂಚನ್ ರವರು ಬಳಿಕ  ಸಿ.ಸಿ.ಟಿವಿ ಯನ್ನು  ಪರಿಶೀಲಿಸಿದಾಗ   ದಿನಾಂಕ 27/02/2023  ರಂದು   ರಾತ್ರಿ 01:45   ಗಂಟೆಯ  ಸಮಯಕ್ಕೆ ಅಪರಿಚಿತರು ಪ್ಯಾನನ್ನು  Madhav  ಮಾಡಿ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿರುವುದು ಗೊತ್ತಾಗಿದೆ .  ಕಳವಾದ ಬೋಟಿನ  ಪ್ಯಾನಿನ  ಅಂದಾಜು ಮೌಲ್ಯ 1,10,000/-   ರೂಪಾಯಿ  ಆಗಿರುತ್ತದೆ ಎಂದು ದೂರು ನೀಡಿದ್ದು ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!