Spread the love

ಹಿರಿಯಡ್ಕ: ದಿನಾಂಕ 6-03-2023( ಹಾಯ್ ಉಡುಪಿ ನ್ಯೂಸ್) ಹಿರಿಯಡ್ಕ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಳ್ಳಂಪಳ್ಳಿಯಲ್ಲಿ ಅಂದರ್ ಬಾಹರ್ ಜುಗಾರಿ ಆಟ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕ ಪೊಲೀಸ್ ಠಾಣೆ ಪಿಎಸ್ಐ ಅನಿಲ್ ಬಿ ಎಂ ಅವರು ದಿನಾಂಕ: 04/03/2023 ರಂದು ಸಿಬ್ಬಂದಿಯರೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಸಮಯ ದಿನಾಂಕ: 05/03/2023 ರಂದು ಬೆಳಗಗಿನ ಜಾವ 1:00 ಗಂಟೆ ಸಮಯಕ್ಕೆ  ಬೆಳ್ಳಂಪಳ್ಳಿ ಗ್ರಾಮದ ಕ್ವಾಲಿಟಿ ವೈನ್ ಶಾಪ್‌ನ  ಹಿಂಭಾಗದಲ್ಲಿ ಕೆಲವು ಯುವಕರು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು  ಅಂದರ್‌ ಬಾಹರ್‌ ‌ಇಸ್ಪೀಟ್‌ ಜುಗಾರಿ ಆಟ ಆಡುತ್ತಿರುವ ಬಗ್ಗೆ  ಖಚಿತವಾದ ಮಾಹಿತಿ ಬಂದ ಮೇರೆಗೆ  1:30 ಗಂಟೆ ಸಮಯಕ್ಕೆ ಇಲಾಖಾ ವಾಹನದಲ್ಲಿ ಕ್ವಾಲಿಟಿ ವೈನ್ ಶಾಪ್ ನ ಸ್ವಲ್ಪ ದೂರದಲ್ಲಿ  ವಾಹನ ನಿಲ್ಲಿಸಿ ಪೊಲೀಸರು ಮರೆಯಲ್ಲಿ ನಿಂತು ನೋಡಿದಾಗ ಸುಮಾರು  5 ರಿಂದ 6 ವ್ಯಕ್ತಿಗಳು ಕ್ವಾಲಿಟಿ ವೈನ್ ಶಾಪ್ ಹಿಂಬಾಗದಲ್ಲಿ ಗುಂಪುಗೂಡಿ ಕುಳಿತಿದ್ದು ಅವರು ಇಸ್ಪೀಟ್ ಎಲೆಯನ್ನು ನೆಲದ ಮೇಲೆ ಹಾಸಲಾಗಿದ್ದ ಪೇಪರ್   ಮೇಲೆ ಹಾಕಿ ಅಂದರ್ , ಬಾಹರ್ 500 ರೂಪಾಯಿ ಎಂದು ಕೂಗಿ   ಹಣವನ್ನು ಪಣವನ್ನಾಗಿ ಇಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತಪಡಿಸಿ ಕೊಂಡು ಅವರನ್ನು  ಸುತ್ತುವರೆದಾಗ ಎಲ್ಲರೂ ಓಡಲು ಯತ್ನಿಸಿದ್ದು  ಅವರಲ್ಲಿ ಇಬ್ಬರನ್ನು ಪೊಲೀಸರು ಹಿಡಿದುಕೊಂಡಿರುತ್ತಾರೆ.. 3-4 ಜನ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ . ವಶಕ್ಕೆ ಪಡೆಯಲಾದ ಇಬ್ಬರನ್ನು ವಿಚಾರಿಸಿದಾಗ ಓರ್ವ ನೆಲ್ಸನ್  ಹಾಗೂ  ನವೀನ್ ಎಂದು ತಿಳಿಸಿರುತ್ತಾರೆ. ಆರೋಪಿ ನೆಲ್ಸನ್ ನ ಅಂಗಿ ಜಪ್ತಿ ಮಾಡಿದಾಗ ಆತನ ಅಂಗಿ ಕಿಸೆಯಲ್ಲಿ 3,200/-  ರೂಪಾಯಿ ಹಾಗೂ ನವೀನ್ ಮೆಂಡನ್ ನ ಅಂಗಿ ಜಪ್ತಿ ಮಾಡಿ ದಾಗ ಆತನ ಬಳಿ 3000- ರೂಪಾಯಿ ಇದ್ದು ಹಣವನ್ನು ಹಾಗೂ ಆರೋಪಿಗಳು ನೆಲಕ್ಕೆ ಹಾಕಿದ್ದ 1000/- ರೂಪಾಯಿ ಒಟ್ಟು 7200/- ರೂ  ಹಣ  ಹಾಗೂ  ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ಓಡಿ ಹೋದವರ ಮೋಟಾರು ಸೈಕಲ್  ನಂಬ್ರ 1. KA20ET8433   2. KA20EV7268  3. KA20EV8203 ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

error: No Copying!