- ಮಲ್ಪೆ: ದಿನಾಂಕ 03-03-2023 ( ಹಾಯ್ ಉಡುಪಿ ನ್ಯೂಸ್ ) ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿವ್ಯೂ ಬಾರ್ ಹಿಂಬದಿ ಜುಗಾರಿ ಆಡುತ್ತಿದ್ದವರನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
- ಮಲ್ಪೆ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ ರವರು ದಿನಾಂಕ 02-03-2023 ರಂದು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕರೋರ್ವರು ಕರೆ ಮಾಡಿ ಕೊಡವೂರು ಗ್ರಾಮದ ಸಿವ್ಯೂ ಬಾರ್ ಹಿಂಬದಿ ಸಾರ್ವಜನಿಕ ಜಾಗದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವುದಾಗಿ ಖಚಿತ ಮಾಹಿತಿ ನೀಡಿ ದಂತೆ ಸಿಬ್ಬಂದಿಯವರಾದ ಶಿವನಾಯ್ಕ್, ರವಿರಾಜ್, ಸಚಿನ್, ರವಿ ಜಾಧವ್ ರೊಂದಿಗೆ ಕೊಡವೂರು ಗ್ರಾಮದ ಸಿವ್ಯೂ ಬಾರ್ ಹಿಂಬದಿ ದಾಳಿ ನಡೆಸಿ ಜುಗಾರಿ ಆಟ ಆಡುತ್ತಿದ್ದ 1) ರೂಪೇಶ್ 2)ಪ್ರಕಾಶ್ 3) ಜಯರಾಮ್ 4) ರಾಜು ಎಂಬವರನ್ನು ವಶಕ್ಕೆ ಪಡೆದು ಇಸ್ಪೀಟು ಎಲೆಗಳು 52, ಪ್ಲಾಸ್ಟಿಕ್ ಚೀಲ ಹಾಗೂ ಜೂಜಾಟಕ್ಕೆ ಬಳಸಿದ ಒಟ್ಟು ಹಣ 9310/- ರೂಗಳನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.