ಮಣಿಪಾಲ: ದಿನಾಂಕ 07/03/2023 (ಹಾಯ್ ಉಡುಪಿ ನ್ಯೂಸ್) ಅಲೆವೂರು ಶಾಲೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದವರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ, ಪೊಲೀಸ್ ಉಪ ನಿರೀಕ್ಷಕರಾದ ನವೀನ್ ಎಸ್.ನಾಯ್ಕ್ ಇವರಿಗೆ ದಿನಾಂಕ 5-03-2023 ರಂದು ದೊರೆತ ಖಚಿತ ಮಾಹಿತಿಯ ಮೇರೆಗೆ ಅಲೆವೂರು ಗ್ರಾಮದ, ಅಲೆವೂರು ಪ್ರಾಥಮಿಕ ಶಾಲೆಯ ಮೈದಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಲ್ಲಿಗೆ ದಾಳಿ ನಡೆಸಿ ಇಸ್ಫಿಟ್ ಜುಗಾರಿ ಆಡುತ್ತಿದ್ದ 1) ಧೀರಜ್ (25), 2) ಗಣೇಶ್ (29), 3) ವೀರಪ್ಪ (41), 4) ಮಹಾಂತೇಶ್ (27), 5) ಮಲ್ಲಪ್ಪ(42), 6) ರಮೇಶ್ ಬಾಬು (66) ಇವರನ್ನು ಹಾಗೂ ಅಂದರ್ ಬಾಹರ್ ಆಟಕ್ಕೆ ಬಳಸಿದ ಇಸ್ಪೀಟ್‌ಎಲೆಗಳು- 52, ದಿನ ಪತ್ರಿಕೆ ಮತ್ತು ನಗದು ರೂಪಾಯಿ 2,430/- ನ್ನು ವಶಕ್ಕೆ ಪಡೆದಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.