- ಶಿರ್ವ: ದಿನಾಂಕ:1-03-2023 (ಹಾಯ್ ಉಡುಪಿ ನ್ಯೂಸ್) ಬೆಳಪು ಗ್ರಾಮದ ವಿನಯ ನಗರದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಈರ್ವರು ಯುವಕರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
- ದಿನಾಂಕ 23/02/2023 ರಂದು ಬೆಳಗ್ಗೆ ಕಾಪು ತಾಲೂಕು ಬೆಳಪು ಗ್ರಾಮದ ವಿನಯನಗರ ಬಳಿ ಈರ್ವರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ ಶಿರ್ವ ಪೊಲೀಸರು ಮಾದಕ ವಸ್ತು ಗಾಂಜಾವನ್ನು ಸಿಗರೇಟ್‌ನಲ್ಲಿ ಸೇರಿಸಿ ಸೇದುತ್ತಿದ್ದ ಈರ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ಸುಫಿಯಾನ (22),ವಾಸ:ಸರ್ವೇನಂಬ್ರ 55/ಪಿ4,ವಾಜಪೇಯಿ ಬಡಾವಣೆ, ಬೆಳಪುಗ್ರಾಮ ಮತ್ತುಅಂಚೆ ಕಾಪು ಹಾಗೂ ಮುಸ್ತಾಕ್ (38) ವಾಸ: ಸರ್ವೆ ನಂಬ್ರ:55/ಪಿ4, ವಾಜಪೇಯಿ ಬಡಾವಣೆ , ಬೆಳಪು ಗ್ರಾಮ ಎಂದು ತಿಳಿಸಿದ್ದು ಅವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಇವರೀರ್ವರು ಗಾಂಜಾ ಮಾದಕ ವಸ್ತು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿ ಬಂದಿದ್ದು, ಅವರನ್ನು ಬಂಧಿಸಿ ಶಿರ್ವ ಪೊಲೀಸರು ಕಾನೂನು ಕ್ರಮ ಕೈಗೊಂಡಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಕಲಂ 27(b) NDPS Act. ರಂತೆ ಪ್ರಕರಣ ದಾಖಲಾಗಿದೆ.