Spread the love

ಉಡುಪಿ: ದಿನಾಂಕ 1-03-2023(ಹಾಯ್ ಉಡುಪಿ ನ್ಯೂಸ್) ಅಪರಿಚಿತ ವ್ಯಕ್ತಿಯೋರ್ವ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಆನ್ಲೈನ್ ಮೂಲಕ ಲಕ್ಷಾಂತರ ರೂಪಾಯಿ ಕದ್ದಿರುವ ಬಗ್ಗೆ ದೂರಲಾಗಿದೆ.

ಉಡುಪಿ ತಾಲೂಕು,ಕುತ್ಪಾಡಿ ಗ್ರಾಮದ ಜನತಾ ಕಾಲೋನಿ ನಿವಾಸಿ ವಿಜಯ ಸುಚಿತ್ರ (73) ಎಂಬವರ ಮಗ ರೊನಾಲ್ಡ್ ಜೆ. ಸುಚಿತ್ರ ಇವರು ಕೆನರಾ ಬ್ಯಾಂಕ್, ಉದ್ಯಾವರ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 28/02/2023 ರಂದು ಯಾರೋ ಅಪರಿಚಿತ ವ್ಯಕ್ತಿ ರೊನಾಲ್ಡ್ ಜೆ. ಸುಚಿತ್ತ ರವರಿಗೆ ಕರೆ ಮಾಡಿ, ಅವರ ತಾನು ಬ್ಯಾಂಕ್ ಅಧಿಕಾರಿ, ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ ನಂಬಿಸಿ, ರೊನಾಲ್ಡ್ ಜೆ. ಸುಚಿತ್ತ ರವರಿಂದ ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ಪಡೆದು, ಅವರ ಬ್ಯಾಂಕ್ ಖಾತೆಯಿಂದ ಕ್ರಮವಾಗಿ ರೂಪಾಯಿ 94,000/- ಮತ್ತು ರೂಪಾಯಿ 1,00,000/- ರಂತೆ ಒಟ್ಟು ರೂಪಾಯಿ 1,94,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಮೋಸದಿಂದ ಅವರಿಗೆ ನಷ್ಟ ಉಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಸೆನ್‌ ಅಪರಾಧ ಠಾಣೆಯಲ್ಲಿ ಕಲಂ: 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!