Spread the love

ಮಣಿಪಾಲ: ದಿನಾಂಕ 28-02-2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡು ಅಲೆವೂರಿನಲ್ಲಿ ಮನೆಗೆ ಕಳ್ಳರು ನುಗ್ಗಿ ಚಿನ್ನಾಭರಣ ಕದ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.

ದಿನಾಂಕ 18/02/2023 ರಂದು ರಾತ್ರಿ ಉಡುಪಿ ತಾಲ್ಲೂಕು  ಶಿವಳ್ಳಿ ಗ್ರಾಮದ ನೆಹರು ನಗರದಲ್ಲಿರುವ  ದಿವಾಕರ ಪೂಜಾರಿ (45) ಕೃಷ್ಣ ಕೃಪಾ ಹೌಸ್‌ ,ನೆಹರು ನಗರ ಮೂಡು ಅಲೆವೂರು ಎಂಬವರ ಮನೆಗೆ ಯಾರೋ ಕಳ್ಳರು ಒಳ ಪ್ರವೇಶಿಸಿ ಮನೆಯ ಬೆಡ್‌ ರೂಂ ನಲ್ಲಿದ್ದ ಕಪಾಟಿನ ಒಳಗೆ ಇರಿಸಿದ ಅಂದಾಜು 20 ಗ್ರಾಂನ ಕಿವಿಯ ಓಲೆ ಮತ್ತು ಸರ, 20 ಗ್ರಾಂನ ಪೆಂಡೆಂಟ್ ಇರುವ‌ ಚಿನ್ನದ ಸರ, 4 ಗ್ರಾಂನ ಚಿನ್ನದ ಉಂಗುರ, 8 ಗ್ರಾಂನ ಚಿನ್ನದ ಸರ, 2 ಗ್ರಾಂನ ಮೂಗಿನ ಬೊಟ್ಟು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಚಿನ್ನಾಭರಣಗಳ ಒಟ್ಟು ಅಂದಾಜು ಮೌಲ್ಯ 2,40,000/- ಆಗ ಬಹುದಾಗಿದೆ ಎಂದು ದೂರು ನೀಡಿದ್ದು , ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!