- ಉಡುಪಿ: ದಿನಾಂಕ 28-02-2023( ಹಾಯ್ ಉಡುಪಿ ನ್ಯೂಸ್) ತಡ ರಾತ್ರಿ ಕರ್ಕಶವಾಗಿ ಡಿಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ಉಪದ್ರ ನೀಡಿದ ದೂರಿನಂತೆ ಪಣಿಯಾಡಿಯಲ್ಲಿ ಡಿಜೆ ಸೌಂಡ್ ಸಿಸ್ಟಮ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- ಉಡುಪಿ ನಗರ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಟಿ.ಎಂ ಇವರು ದಿನಾಂಕ: 26/02/2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ದಿನಾಂಕ 27/02/2023 ರಂದು ಬೆಳಗಿನ ಜಾವ 01:30 ಗಂಟೆಗೆ ಕುಂಜಿಬೆಟ್ಟು ಪರಿಸರದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್ ಹಾಕಿ ಉಪದ್ರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಮೇರೆಗೆ, ರಾತ್ರಿ 01:45 ಗಂಟೆಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ಬಳಿಯ ಶರತ್ ಎಂಬಾತನ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್ ಹಾಕಿಕೊಂಡು ರಾತ್ರಿ 02:00 ಗಂಟೆ ತನಕ ನೃತ್ಯ ಮಾಡುತ್ತಿದ್ದು, ಪೊಲೀಸರು ಕಾನೂನು ಬಾಹಿರವಾಗಿ ಡಿಜೆ ಸೌಂಡ್ ಬಳಸುತ್ತಿರುವ ಬಗ್ಗೆ ಕ್ರಮ ಕೈಗೊಂಡಿದ್ದಾರೆ.
- ಅನಧಿಕೃತವಾಗಿ ಬಳಸಲಾದ Pearl 1024B Light Controller-1, DJ Controller-1, Sound Controller-1 ಹಾಗೂ ಕಪ್ಪು ಬಣ್ಣದ ಸೌಂಡ್ ಬಾಕ್ಸ್- 4 ಸ್ವತ್ತುಗಳನ್ನು ಪೊಲೀಸರು ಸ್ವಾಧೀನಪಡಿಸಿ ಕೊಂಡಿರುತ್ತಾರೆ.. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 109 KP ACT ಯಂತೆ ಪ್ರಕರಣ ದಾಖಲಾಗಿದೆ.