- ಹೆಬ್ರಿ: ದಿನಾಂಕ 25-02-2023(ಹಾಯ್ ಉಡುಪಿ ನ್ಯೂಸ್) ಕುಡುಕ ಮಗನ ಉಪಟಳದಿಂದ ಬೇಸತ್ತ ತಂದೆ ಸಿಟ್ಟಿನ ಭರದಲ್ಲಿ ಮಗನನ್ನೇ ಹೊಡೆದು ಕೊಂದ ಘಟನೆ ಹೆಬ್ರಿಯಲ್ಲಿ ನಡೆದಿದೆ.
- ಕುಟ್ಟಿ ಪೂಜಾರಿ ಹಾಗೂ ಮೃತನಾಗಿರುವ ಸತೀಶ್ ಪೂಜಾರಿ(40) ಇವರು ತಂದೆ ಹಾಗೂ ಮಗ ಆಗಿದ್ದು, ಅವರು ಹೆಬ್ರಿ ತಾಲೂಕು ವರಂಗ ಗ್ರಾಮದ ಮೂಡುಬೆಟ್ಟು ಶ್ರೀ ಮಣಿಕಂಠ ನಿಲಯ ಎಂಬ ಮನೆಯಲ್ಲಿ ವಾಸವಿದ್ದು, ಸತೀಶ್ ಪೂಜಾರಿ ದಿನಂಪ್ರತಿ ಮದ್ಯಪಾನ ಮಾಡಿ ತಂದೆಯೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ.
- ಅದೇ ರೀತಿ ದಿನಾಂಕ 24/02/2023 ರಂದು ರಾತ್ರಿ 9:00 ಗಂಟೆಗೆ ಕುಟ್ಟಿ ಪೂಜಾರಿ ಯವರು ಮನೆಯ ಒಳಗೆ ಮಲಗಿದ್ದಾಗ ಸತೀಶ ಪೂಜಾರಿಯು ವಿಪರೀತ ಮದ್ಯಪಾನ ಸೇವಿಸಿ ಬಂದು ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಯ ಬಾಗಿಲಿಗೆ ಕಾಲಿನಿಂದ ಒದ್ದು ಕುಟ್ಟಿ ಪೂಜಾರಿಯವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದಾಗ ಕೋಪಗೊಂಡ ಕುಟ್ಟಿ ಪೂಜಾರಿಯು ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿ ರವರ ಕೈಕಾಲುಗಳಿಗೆ ಹಲ್ಲೆ ನಡೆಸಿದ ಪರಿಣಾಮ ಸತೀಶ ಪೂಜಾರಿ ಅಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಸುರೇಶ್ ಪೂಜಾರಿ (42), ಯವರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ.