ಉಡುಪಿ : ದಿನಾಂಕ 23-02-2023(ಹಾಯ್ ಉಡುಪಿ ನ್ಯೂಸ್) ಮುಂಜಾನೆಯ ವಾಕಿಂಗ್ ನಡೆಸುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು ಬೈಕಿನಲ್ಲಿ ಬಂದ ಯುವಕರೀರ್ವರು ದೋಚಿದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀಮತಿ ವಿಜಯ ಜೆ.ಎಸ್ ಪ್ರಾಯ: 61 ವರ್ಷ ‘ಸಪ್ತಸ್ವರ’, ಸತ್ಯ ಸಾಯಿ ಮಾರ್ಗ, ಬ್ರಹ್ಮಗಿರಿ, ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿದ್ದು , ಇವರು ದಿನಾಂಕ: 22/02/2023 ರಂದು ಬೆಳಿಗ್ಗೆ 06 ಗಂಟೆಯ ಸುಮಾರಿಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಾಯರ್‌ಕೆರೆ ವಾಣಿಜ್ಯ ತೆರಿಗೆಗಳ ಭವನದ ಎದುರು ರಸ್ತೆಯಲ್ಲಿ ಬ್ರಹ್ಮಗಿರಿ ಕಡೆಗೆ ನಡೆದುಕೊಂಡು ಬರುತ್ತಿರುವಾಗ, ಅವರ ಹಿಂದಿನಿಂದ ಮೋಟಾರ್‌ಸೈಕಲಿನಲ್ಲಿ ಬಂದ ಅಂದಾಜು 20 ರಿಂದ 30 ವರ್ಷ ಪ್ರಾಯದ ಇಬ್ಬರು ಯುವಕರುಗಳ ಪೈಕಿ, ಹಿಂದೆ ಕೂತಿದ್ದವನು ಏಕಾಏಕಿ ಹಿಂದಿನಿಂದ ಶ್ರೀಮತಿ ವಿಜಯರವರ ಕುತ್ತಿಗೆಗೆ ಕೈ ಹಾಕಿ ತಳ್ಳಿ, ನೆಲಕ್ಕೆ ಬೀಳಿಸಿ, ಅವರ ಕುತ್ತಿಗೆಯಲ್ಲಿದ್ದ ಅಂದಾಜು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯದ ಸರವನ್ನು ದರೋಡೆ ಮಾಡಿಕೊಂಡು ಹೋಗಿದ್ದು, ದರೋಡೆಯಾದ ಚಿನ್ನದ ಮಾಂಗಲ್ಯದ ಸರದ ಮೌಲ್ಯ್ರ ರೂ. 2,50,000/- ಆಗಬಹುದು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.