Spread the love

ಮಣಿಪಾಲ: ದಿನಾಂಕ 23/02/2023(ಹಾಯ್ ಉಡುಪಿ ನ್ಯೂಸ್) ವೇಶ್ಯಾವಾಟಿಕೆ ನಡೆಸುತ್ತಿದ್ದ ಮಣಿಪಾಲದ ಲಾಡ್ಜ್ ಒಂದಕ್ಕೆ ಮಣಿಪಾಲ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ. ಇವರಿಗೆ ದಿನಾಂಕ 22-02-2023 ರಂದು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಶ್ರೀ ಸಾಯಿ ಲಾಡ್ಜ್‌ ನಲ್ಲಿ ರೂಮ್‌ ನಂಬರ್‌ 201 ಮತ್ತು 202 ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದಾಗ ಶ್ರೀ ಸಾಯಿ ಲಾಡ್ಜ್ ನ ರೂಮ್‌ ನಂಬರ್‌ 201 ರಲ್ಲಿ ಒಂದು ಹೆಂಗಸು ಮತ್ತು 202 ರಲ್ಲಿ ಒಂದು ಹೆಂಗಸು ಮತ್ತು ಒಂದು ಗಂಡಸು ಇದ್ದು, ಅನೈತಿಕ ವೇಶ್ಯಾವಟಿಕೆಯಲ್ಲಿ ತೊಡಗಿದ್ದವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ .

ಈ ಹೋಟೆಲ್‌ನ ಮೇನೇಜರ್‌ ಸಂಪತ್‌ ಕುಮಾರ್‌ ಮತ್ತು  ಕೆಲಸಕ್ಕೆ ಇರುವ ಸಂತೋಷ್‌ ಮತ್ತು ದಿನೇಶ್‌ ಇವರು ಹೆಂಗಸರನ್ನು  ಅನೈತಿಕ ವೇಶ್ಯವಾಟಿಕೆ ಚಟುವಟಿಕೆ ಮಾಡುವಂತೆ ಈ ರೂಮಿನಲ್ಲಿ ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ದೂರು ದಾಖಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.   

error: No Copying!