ಮಣಿಪಾಲ: ದಿನಾಂಕ 22/02/2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಆರ್ ಟಿ ಓ ಪರಿಸರದಲ್ಲಿ ಮಾದಕವಸ್ತು, ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯೋರ್ವ ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಇವರಿಗೆ ದಿನಾಂಕ 21-02-2023 ರಂದು ಬಂದ ಖಚಿತ ವರ್ತಮಾನದಂತೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಆರ್.ಟಿ.ಓ ಬಳಿ ಸ್ಕೂಟಿಯಲ್ಲಿ ಮಾದಕವಸ್ತು ಹಾಗೂ ಗಾಂಜಾ ಮಾರುತ್ತಿರುವ ವ್ಯಕ್ತಿಗಳನ್ನು ದಾಳಿ ನಡೆಸಿ ಬಂಧಿಸುವಂತೆ ಮಾನ್ಯ ಪೊಲೀಸ್ ಅಧೀಕ್ಷಕರವರ ಸೂಚನೆ ಯಂತೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಮಾದಕವಸ್ತು ಮಾರಾಟಮಾಡಲು ಕಾಯುತ್ತಿದ್ದ ವ್ಯಕ್ತಿಯೋರ್ವ ನನ್ನು ವಿಚಾರಣೆ ನಡೆಸಿದಾಗ ಆತ ಇಕ್ಬಾಲ್ ಶೇಕ್, (32) ಮಾತಾ ಶ್ರೀ , ವಾಸುಕಿ ನಗರ 5 ನೇ ಕ್ರಾಸ್ ಕೊರಂಗ್ರಪಾಡಿ, 76 ಬಡಗಬೆಟ್ಟು ಗ್ರಾಮ ಉಡುಪಿ ಎಂಬಲ್ಲಿಯ ನಿವಾಸಿ ಎಂದು ತಿಳಿಸಿದ್ದು, ಆತನನ್ನು ಬಂಧಿಸಿ ಆತನ ವಶದಲ್ಲಿದ್ದ 136 ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್‌ಸಮೇತ), 0.36 ಗ್ರಾಂ ಎಂ ಡಿ ಎಂ ಎ (ಪ್ಲಾಸ್ಟಿಕ್ ಕವರ್‌ಸಮೇತ), 1 ಮೊಬೈಲ್ ಪೋನ್, ಜಿಯೋ ಕಂಪನಿಯ ವೈಫೈ Router, ಕೆಎ-20-ಇಕ್ಯೂ-3582 ನಂಬ್ರದ TVS Dio ಸ್ಕೂಟಿ, ಹಾಗೂ ನಗದು ಹಣವನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡ ಸ್ವತ್ತಿನ ಮೌಲ್ಯ ರು. 44700/- ಆಗಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ 8 (c) 20 (b) (ii) (A), 21(b), 22(b) ಎನ್.ಡಿ.ಪಿ.ಎಸ್ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.