Spread the love

ಉಡುಪಿ: ದಿನಾಂಕ 9-02-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಸಂತೆಕಟ್ಟೆಯಲ್ಲಿ ವ್ಯಕ್ತಿಯೋರ್ವರಿಗೆ ಕ್ಷುಲ್ಲಕ ಕಾರಣಕ್ಕೆ ಗಂಭೀರ ಹಲ್ಲೆ ನಡೆಸಿರುವ ಬಗ್ಗೆ ದೂರಲಾಗಿದೆ.

ಶಿವಮೊಗ್ಗ ಜಿಲ್ಲೆಯ, ಸಿರ್ನೆಯ, ಕೊಪ್ಪದ ತಾಂಡ, ಕುಬ್ಬಗಡಿ ಹೋಬಳಿ, ತತೂರು ಗ್ರಾಮ, ಸೊರಬ ತಾಲೂಕು ನಿವಾಸಿ ಫಕೀರಪ್ಪ (29) ಇವರು ದಿನಾಂಕ 07/02/2023 ರಂದು ಸಂಜೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ನವಮಿ ಬೇಕರಿಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಎದುರುಗಡೆಯಿಂದ ಶಂಕರ, ಸಂತೆಕಟ್ಟೆ, ಉಡುಪಿ ಎಂಬಾತ ಬಂದಿದ್ದು, ಆತನ ಭುಜಕ್ಕೆ ಫಕೀರಪ್ಪರ ಭುಜ ತಾಗಿದ ಕಾರಣಕ್ಕೆ ಆತನು ಕೋಪಗೊಂಡು, ಫಕೀರಪ್ಪರ ಹಿಂದಿನಿಂದ ಕಲ್ಲಿನಲ್ಲಿ ತಲೆಗೆ ಹೊಡೆದ ಪರಿಣಾಮ ಫಕೀರಪ್ಪರು ನೆಲಕ್ಕೆ ಬಿದ್ದಾಗ ಶಂಕರನು ಒಂದು ಕೋಲಿನಿಂದ ಮುಖಕ್ಕೆ ಹಾಗೂ ತಲೆಗೆ ಗಂಭೀರ ಹಲ್ಲೆ ಮಾಡಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಂತೆ ಈ  ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!