Spread the love

ಉಡುಪಿ: ದಿನಾಂಕ:8-02-2023 (ಹಾಯ್ ಉಡುಪಿ ನ್ಯೂಸ್) ನಗರದ ಬಾರ್ ಒಂದರ ಬಳಿ ರೌಡಿ ರಂಜಿತ್ ಪಿಂಟೋ ಗೆ ಯುವಕರಿಬ್ಬರು ಗಂಭೀರ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಉಡುಪಿ,ಸಂತೆಕಟ್ಟೆ, ಕಲ್ಯಾಣಪುರ,ಕೋಟೆ ರಸ್ತೆ ನಿವಾಸಿ ರಂಜಿತ್ ಪಿಂಟೋ (43) ಎಂಬವರು ಉಡುಪಿ ಜಿಲ್ಲೆಯಲ್ಲಿ ನಡೆದ ಹಲವಾರು ಹಲ್ಲೆ ಪ್ರಕರಣಗಳಲ್ಲಿ ಗುರುತಿಸಿ ಕೊಂಡಿದ್ದು

ರಂಜಿತ್ ಪಿಂಟೋ ರಿಗೆ ಕೃಷ್ಣ ಮತ್ತು ರಮೇಶ್ ಎಂಬವರು ಹಲ್ಲೆ ಮಾಡುವ ಉದ್ದೇಶದಿಂದ ಸೇರಿಕೊಂಡು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಚಾಲುಕ್ಯ ಬಾರ್‌ಬಳಿ ದಿನಾಂಕ 07/02/2023 ರಂದು ಬೆಳಿಗ್ಗೆ ಅವಾಚ್ಯ ಶಬ್ದಗಳಿಂದ ಬೈದು, ಸೋಡಾ ಬಾಟಲಿಯಿಂದ ರಂಜಿತ್ ಪಿಂಟೋರ ಎಡತಲೆಗೆ ಹೊಡೆದು ಗಂಭೀರ ಗಾಯಗೊಳಿಸಿದ್ದಾರೆ ಎಂದು ದೂರಲಾಗಿದೆ.ಇದೀಗ ರೌಡಿ ರಂಜಿತ್ ಪಿಂಟೋ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ,ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!