Spread the love
  • ಬ್ರಹ್ಮಾವರ: ದಿನಾಂಕ 19-01-2023(ಹಾಯ್ ಉಡುಪಿ ನ್ಯೂಸ್) ಹೊಸಾಳ ಗ್ರಾಮ ,.ಹರ್ಷ ದೀಪ ಸರಕಾರಿ ಆಸ್ಪತ್ರೆ ಎದುರು ನಿವಾಸಿ ಗಂಗಾಧರ ಜೋಷಿ (63) ಅವರು ದಿನಾಂಕ:  15/01/2023 ರಂದು ಬೆಳಗಿನ ಜಾವ 04:30 ಗಂಟೆಗೆ ಮನೆಗೆ ಬೀಗ ಹಾಕಿ ಹೊಸಗದ್ದೆಯಲ್ಲಿರುವ ತನ್ನ ತಂದೆಯ ಶ್ರಾದ್ಧ ಕಾರ್ಯ  ಮುಗಿಸಿ  ದಿನಾಂಕ: 18/01/2023 ರಂದು ಬೆಳಿಗ್ಗೆ ಮನೆಗೆ ವಾಪಸ್ ಬಂದು ನೋಡಿದಾಗ ಯಾರೋ ಕಳ್ಳರು  ಮನೆಯ ಎದುರಿನ ಪ್ರವೇಶ ಬಾಗಿಲಿನ ಚಿಲಕದ ಕೊಂಡಿ  ಮುರಿದು  ಸಿಟ್‌ ಔಟ್‌ನಲ್ಲಿ ಬಿದ್ದಿದ್ದು ಚಿಲಕಕ್ಕೆ ಹಾಕಿದ  ಬೀಗ ಹಾಕಿದ  ಸ್ಥಿತಿಯಲ್ಲಿ ಇದ್ದು ಬಟ್ಟೆಯ ದಾರದಿಂದ ಕಟ್ಟಿರುವುದು ಕಂಡು ಬಂದಿರುತ್ತದೆ.   ಗಂಗಾಧರ ಜೋಷಿ ಯವರು ಮನೆ ಬಾಗಿಲು ತೆರೆದು ಒಳಗೆ ಹೋಗಿ ನೋಡಿದಾಗ  ಮನೆಯ ಎಲ್ಲಾ ಕೋಣೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿ  ಬಿದ್ದಿದ್ದು  2 ಬೆಡ್‌ ರೂಂ ಕಪಾಟುಗಳನ್ನು ತೆರೆದು ಜಾಲಾಡಿ ಕಪಾಟುಗಳಲ್ಲಿ ಇದ್ದ ಸುಮಾರು  4 ಗ್ರಾಂ ತೊಕದ ಚಿನ್ನದ ಕಿವಿಯ ಬೆಂಡೋಲೆ 1, ರೂ 16,000 /-, ಸುಮಾರು 3 ಗ್ರಾಂ ತೊಕದ ಚಿನ್ನದ ಕಿವಿಯ ಬೆಂಡೋಲೆ 1 ಜೊತೆ ರೂ 10,000 /-, 4 ಸಣ್ಣ ಬೆಳ್ಳಿಯ ಕುಂಕುಮದ ಕರಡಿಗೆ – 50 ಗ್ರಾಂ  ರೂ  3500 /-,   2 ಬೆಳ್ಳಿಯ ಲೋಟ – 50 ಗ್ರಾಂ ರೂ 3500/-, 1 ಬೆಳ್ಳಿಯ ಕವಳಿಗೆ ಸೌಟು  – 75 ಗ್ರಾಂ  ರೂ 5000/- , ½ ಪವನ  ತೂಕದ  ಬೆಳ್ಳಿಯ ಮುತ್ತಿನ ಸರ – ರೂ  3000 /-, ಬೆಳ್ಳಿಯ ಕೀ ಬಂಚ್‌ -50 ಗ್ರಾಂ ರೂ 4500/-,  ಸುಮಾರು 12 ಗ್ರಾಂ ತೂಕದ ಬೆಳ್ಳಿಯ ದೀಪ -1 ರೂ 8500/- ಹಾಗೂ ನಗದು  ರೂ 50,000 ಇವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು  ಹೋಗಿರುತ್ತಾರೆ, ಕಳವಾದ ನಗದು ಹಾಗೂ ಒಟ್ಟು ಸೊತ್ತಿನ ಬೆಲೆ ರೂ. 1,04,000/- ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ  ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
error: No Copying!