Spread the love

ಕಾರ್ಕಳ: ದಿನಾಂಕ:19-01-2023 (ಹಾಯ್ ಉಡುಪಿ ನ್ಯೂಸ್) ಕಾರ್ಕಳದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಗೆಂದು ದಾಖಲಾದ ಮಹಿಳೆಯ ಕರಿಮಣಿ ಸರ ವನ್ನು ಯಾರೋ ಕಳ್ಳರು ಕದ್ದಿರುವ ಬಗ್ಗೆ ದೂರು ದಾಖಲಾಗಿದೆ.

ದ.ಕ ಜಿಲ್ಲೆ, ಬೆಳ್ತಂಗಡಿ ತಾಲೂಕು, ಮೋಗು ಗ್ರಾಮದ ಸೂಲ್ಕೇರಿ ನಿವಾಸಿ ಸಂಕೇತ್ (31) ಇವರ ಹೆಂಡತಿ ಉಷಾ ಎಂಬುವವರನ್ನು ಹೆರಿಗೆಯ ಬಗ್ಗೆ ದಿನಾಂಕ 15/01/2023 ರಂದು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ದಿನಾಂಕ 16/01/2023 ರಂದು ಹೆರಿಗೆ ಆಗಿದ್ದು, ಹೆರಿಗೆ ನಂತರ ವಾರ್ಡ್ ನಲ್ಲಿ ದಾಖಾಲಾಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ  17/01/2023 ರಂದು ಮದ್ಯಾಹ್ನ 2:30 ಕ್ಕೆ ಸಂಕೇತ್ ರವರ ಹೆಂಡತಿ ವಾರ್ಡ್ ನೊಳಗಿರುವ ಬಾತ್ ರೂಮ್ ಗೆ ಸ್ನಾನಕ್ಕೆಂದು ಹೋಗಿದ್ದು ಸ್ನಾನ ಮಾಡುವ ಸಮಯ ತನ್ನ 32 ಇಂಚು ಉದ್ದದ 1 ಚಿನ್ನದ ತಾಳಿ ಹೊಂದಿರುವ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ತೆಗೆದು ಬಾತ್ ರೂಮ್ ನಲ್ಲಿ ಸಿಕ್ಕಿಸಿ ಇಟ್ಟಿದ್ದು ಸ್ನಾನ ಮಾಡುವ ಸಮಯ ಅವರಿಗೆ ತಲೆ ತಿರುಗಿದಂತಾಗಿ ಅವರನ್ನು ಅವರ ತಾಯಿ ಮೋಹಿನಿ ಎಂಬುವವರು ಬೆಡ್ಡಿನಲ್ಲಿ ಕರೆದುಕೊಂಡು ಬಂದು ಮಲಗಿಸಿದ್ದು ಒಂದು ಗಂಟೆಯ ನಂತರ ಕರಿಮಣಿಸರ ಕಾಣಿಸದೇ ಇದ್ದು ಬಾತ್ ರೂಮಿನಲ್ಲಿ ಹೋಗಿ ನೋಡಿದಾಗ ಕರಿಮಣಿಸರವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎನ್ನಲಾಗಿದೆ. ಕಳುವಾದ ಕರಿಮಣಿ ಸರದ  ಮೌಲ್ಯ 1,30,000/- ರೂಪಾಯಿ ಆಗಿರುತ್ತದೆ ಎಂದು ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!