- ಉಡುಪಿ: ದಿನಾಂಕ 8-01-2023 (ಹಾಯ್ ಉಡುಪಿ ನ್ಯೂಸ್ ) ಉಡುಪಿ ನಗರದ ಕೆ.ಎಮ್ ಮಾರ್ಗದಲ್ಲಿರುವ ಆಯುರ್ವೇದ ಸ್ಟೋರ್ಸ್ ನಲ್ಲಿ ರಾತ್ರಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.
- ಡಾ. ಚಂದ್ರಶೇಖರ ರಾವ್.ಹೆಚ್ (38) ಶ್ರೀ ಕೃಷ್ಣ ಸೌರಭ, ಚರ್ಚ್ ಎದುರು, ಕೆ.ಎಂ ಮಾರ್ಗ, ಉಡುಪಿ ಇವರು ಆಯುರ್ವೇದ ವೈದ್ಯರಾಗಿದ್ದು, ಉಡುಪಿ ನಗರದ ಕೆ.ಎಂ ಮಾರ್ಗದಲ್ಲಿರುವ ಮದರ್ ಆಫ್ ಸಾರೋಸ್ ಚರ್ಚ್ ಎದುರಿನಲ್ಲಿ ಉಡುಪಿ ಆಯುರ್ವೇದ ಸ್ಟೋರ್ಸ್ ಎಂಬ ಅಂಗಡಿಯನ್ನು ಹೊಂದಿದ್ದು, ದಿನಾಂಕ 06/01/2023 ರಂದು ರಾತ್ರಿಯ ಸಮಯದಲ್ಲಿ ಯಾರೋ ಕಳ್ಳರು ಡಾ. ಚಂದ್ರಶೇಖರ ರಾವ್.ಹೆಚ್ ರವರ ಅಂಗಡಿಯ ಶೆಟರ್ ನ್ನು ಎಳೆದು ಒಳಪ್ರವೇಶಿಸಿ, ಕ್ಯಾಶ್ ಕೌಂಟರ್ ನ ಬೀಗ ಮುರಿದು ಅದರಲ್ಲಿದ್ದ ನಗದು ರೂಪಾಯಿ 7300/-ರೂ. 9,000 ಮೌಲ್ಯದ 5 ರೂಪಾಯಿ ನಾಣ್ಯಗಳು, Honor 8x ಕಂಪೆನಿಯ ಮೊಬೈಲ್-1 ಹಾಗೂ ಕೆಲವು ಡ್ರೈಪ್ರೂಟ್ಸ್ ಪ್ಯಾಕೇಟ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 20,000/- ಆಗಬಹುದುದಾಗಿದೆ ಎಂದು ದೂರು ದಾಖಲಿಸಿದ್ದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.