Spread the love
  • ಮಣಿಪಾಲ: ದಿನಾಂಕ 8-01-2023 ( ಹಾಯ್ ಉಡುಪಿ ನ್ಯೂಸ್)  ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಈರ್ವರನ್ನು ಪೊಲೀಸರು ಬಂಧಿಸಿದ್ದಾರೆ.
  • ದಿನಾಂಕ  05.01.2023 ರಂದು ರಾತ್ರಿ ಮಣಿಪಾಲ ಪೊಲೀಸ್‌ ಠಾಣಾ ಹೆಚ್ ಸಿ ಪ್ರಸನ್ನ ಹಾಗೂ ಹೆಚ್ ಸಿ ಇಮ್ರಾನ್ ಇವರುಗಳು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ 7th Heaven ಪಬ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಉಡುಪಿ,ಚಿಟ್ಪಾಡಿ ಶಾರದಾಂಬಾ ಟೆಂಪಲ್ ಬಳಿ ನಿವಾಸಿ ಫರೇಶ್ (20) ಎಂಬವನನ್ನು ಹಾಗೂ ಉಡುಪಿ ನಗರದ ಒಳಕಾಡುವಿನ , ಬೈಲೂರು ಕಾಂಪ್ಲೆಕ್ಸ್ ನ ನಿವಾಸಿ ಪ್ರತೀಕ್ (22) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರ ಪೊಲೀಸ್ ಉಪನಿರೀಕ್ಷಕರಾದ ಅಬ್ದುಲ್ ಖಾದರ್ ರವರ ಮುಂದೆ ಹಾಜರುಪಡಿಸಿದ್ದು ಇವರೀರ್ವರು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವಂತೆ ಎ ಎಸ್ ಐ ಶೈಲೇಶ್ ಕುಮಾರ್ ಹಾಗೂ ಪಿ ಸಿ ಉಮೇಶ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ.
  • .  ಆರೋಪಿಗಳಾದ ಫರೇಶ್‌, ಪ್ರಾಯ: 20 ವರ್ಷ ಹಾಗೂ ಪ್ರತೀಕ್ (22) ಇವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ  ಮಣಿಪಾಲ ಠಾಣೆಯಲ್ಲಿ 27(b) NDPS Act ಯಂತೆ ಪ್ರಕರಣ ದಾಖಲಿಸಲಾಗಿದೆ.,

error: No Copying!