Spread the love

ಉಡುಪಿ: ದಿನಾಂಕ:6-01-2023 (ಹಾಯ್ ಉಡುಪಿ ನ್ಯೂಸ್) ನಗರದ ಬನ್ನಂಜೆಯಲ್ಲಿ ಹಗಲಿನಲ್ಲಿಯೇ ದ್ವಿಚಕ್ರ ವಾಹನ ವೊಂದನ್ನು ಕಳ್ಳತನ ನಡೆಸಿರುವ ಬಗ್ಗೆ ದೂರಲಾಗಿದೆ.

ಉಡುಪಿ , ಕಿನ್ನಿಮೂಲ್ಕಿ, ಶಾಂತಾನಂದ ಅಪಾರ್ಟ್‌ಮೆಂಟ್‌ ನಿವಾಸಿ ಶ್ಯೆಲೇಶ್ ನಾಯಕ್ (47) ಇವರು HONDA ACTIVA ಸ್ಕೂಟರ್‌ ನಂಬ್ರ KA-20-ET-9124 ಅನ್ನು ದಿನಾಂಕ 01/01/2023 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಾರಾಯಣಗುರು ಮಂದಿರದ ಎದುರು ನಿಲ್ಲಿಸಿದ್ದು, ವಾಪಾಸು ಬೆಳಿಗ್ಗೆ 10:30 ಗಂಟೆಗೆ ಬಂದು ನೋಡಿದಾಗ ಸ್ಕೂಟರ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಸ್ಕೂಟರನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ ನ  ಮೌಲ್ಯ ರೂಪಾಯಿ  50,000/- ಆಗಿರುತ್ತದೆ ಎಂದು ದೂರು ನೀಡಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .

error: No Copying!