ಮಲ್ಪೆ: ದಿನಾಂಕ 18-12-2022 (ಹಾಯ್ ಉಡುಪಿ ನ್ಯೂಸ್) ಮೆಹಂದಿ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುವ ಹಾಗೆ ಕರ್ಕಶವಾಗಿ ಡಿಜೆಯನ್ನು ತಡರಾತ್ರಿ ವರೆಗೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಮಲ್ಪೆ ಠಾಣಾ ಪಿಎಸ್ಐ ಸುಷ್ಮಾ ಜಿ ಬಿ ರವರು ರಾತ್ರಿ ಪ್ರಭಾರದಲ್ಲಿ ಕರ್ತವ್ಯದಲ್ಲಿರುವಾಗ ಕೊಡವೂರು ಗ್ರಾಮದ ಮದ್ವನಗರ ಪರಿಸರದಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಡಿ ಜೆ ಸೌಂಡ್ ಹಾಕಿ ಸಾರ್ವಜನಿಕರಿಗೆ ಉಪದ್ರ ವಾಗುತ್ತಿರುವುದಾಗಿ ಸಾರ್ವಜನಿಕರು ಠಾಣೆಗೆ ದೂರವಾಣೆ ಕರೆ ಮಾಡಿ ತಿಳಿಸಿದ್ದು , ಮಾಹಿತಿ ತಿಳಿಸಿದಂತೆ ಇವರು , ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಗಳೊಂದಿಗೆ ಇಲಾಖಾ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹೋಗಿ ನೋಡಿದಾಗ ಮದ್ವನಗರ ನಿವಾಸಿ ಕಿಶನ್ ಎಂಬವರ ಮನೆಯಲ್ಲಿ ಮದುವೆಯ ಮೆಹಂದಿ ಕಾರ್ಯ ಕ್ರಮದಲ್ಲಿ ಅತೀ ಕರ್ಕಶವಾದ ಡಿ ಜೆ ಸೌಂಡ್ ಹಾಕಿ ಕೊಂಡು ಕಾರ್ಯ ಕ್ರಮವನ್ನು ತಡ ರಾತ್ರಿವರೆಗೂ ನಡೆಸುತ್ತಿದ್ದು, ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆ ಯಾ ಪೂರ್ವಾನುಮತಿ ಪಡೆದುಕೊಂಡಿದ್ದೀರೋ ಎಂದು ಪೊಲೀಸರು ವಿಚಾರಣೆ ನಡೆಸಿದಾಗ ಕಿಶಾನ್ ರವರು ಯಾವುದೇ ಪೂರ್ವಾನುಮತಿ ಅಥವಾ ಪರವಾನಿಗೆಯನ್ನು ಪಡೆದುಕೊಂಡಿರುವುದಿಲ್ಲವಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.
ಹಾಗೂ ಕಾರ್ಯ ಕ್ರಮದಲ್ಲಿ ಡಿಜೆ ಯನ್ನು ಅಳವಡಿಸಿರುವವರ ಬಗ್ಗೆ ವಿಚಾರಿಸಿದಾಗ ತೊಟ್ಟಂ ನಾಗರಾಜರವರ ಡಿ ಜೆ ಆಗಿರುವುದಾಗಿ ತಿಳಿಸಿರುತ್ತಾರೆ. ಮೆಹಂದಿ ಕಾರ್ಯಕ್ರಮ ದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ತಡ ರಾತ್ರಿವರೆಗೆ ದ್ವನಿವರ್ದಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವವಾಗುವ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ತೊಂದರೆವುಂಟುಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.