ಮಣಿಪಾಲ: ದಿನಾಂಕ 18-12-2022(ಹಾಯ್ ಉಡುಪಿ ನ್ಯೂಸ್) ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳು ನೆರೆಮನೆಯ ಯುವತಿಗೆ ಹರಿತವಾದ ಆಯುಧ ವೊಂದರಿಂದ ಗೀರಿ ಗಾಯಗೊಳಿಸಿರುವ ಬಗ್ಗೆ ದೂರು ದಾಖಲಾಗಿದೆ.
ಉಡುಪಿ, 80 ಬಡಗುಬೆಟ್ಟು ಗ್ರಾಮದ ಪರ್ಕಳ, ನೇತಾಜಿ ನಗರ ನಿವಾಸಿ ಶ್ರೇಯಾ (16) ಇವರು ದಿನಾಂಕ 17/12/2022 ರಂದು ಬೆಳಿಗ್ಗೆ ತಮ್ಮ ಮನೆಯಲ್ಲಿರುವಾಗ ಇವರ ಮನೆಯ ಹತ್ತಿರದ ರೇವತಿ ಎಂಬುವವರು ಏಕಾಏಕಿ ಶ್ರೇಯಾ ರವರ ಮನೆಯ ಒಳಗೆ ಅಕ್ರಮವಾಗಿ ಪ್ರವೇಶಿಸಿ ನೀವು ಸಾಕಿದ ನಾಯಿ ನಮ್ಮ ಸಂಬಂದದವರ ಮನೆಗೆ ಬರುತ್ತದೆ, ಹೀಗೆ ನಾಯಿ ಬರುತ್ತಾ ಇದ್ದರೆ ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಬ್ಬಿಣದ ಒಂದು ವಸ್ತುವಿನಿಂದ ಶ್ರೇಯಾ ರವರ ಎರಡು ಕೈ ಕಾಲುಗಳಿಗೆ ಮತ್ತು ಎದೆಯ ಎಡಬದಿಗೆ ಗೀರಿದ್ದು ಪರಿಣಾಮ ಕೈ ಕಾಲಿನಲ್ಲಿ ರಕ್ತ ಬಂದಿದ್ದು, ಆ ಸಮಯ ಮನೆಯಲ್ಲಿದ್ದ ಶ್ರೇಯಾ ರವರ ತಾಯಿ ಹಾಗೂ ನೆರೆ ಮನೆಯ ಕವಿತಾ ಎಂಬವರು ಬಂದು ಬಿಡಿಸಿದ್ದು, ನಂತರ ರೇವತಿ, ಶ್ರೇಯಾ ಇವರನ್ನು ಉದ್ದೇಶಿಸಿ ನೀನು ಈಗ ಬದುಕಿದ್ದೀಯಾ ನಿನ್ನನ್ನು ಮುಂದೆ ನೋಡಿಕೊಳ್ಳುತ್ತೇನೆ, ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾಳೆ ಎಂದು ಶ್ರೇಯಾ ರವರು ಪೊಲೀಸರಿಗೆ ದೂರಿದ್ದಾರೆ.. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.