ಉಡುಪಿ: ದಿನಾಂಕ 8-12-2022(ಹಾಯ್ ಉಡುಪಿ ನ್ಯೂಸ್) ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿರುವ ಮಹಾರಾಷ್ಟ್ರ ಸರ್ಕಾರದ ಸಚಿವರುಗಳು, ಶಿವಸೇನೆ ಮತ್ತು ಎಂ. ಇ. ಎಸ್. ಸಂಘಟನೆಯ ಪುಂಡರು ಮಹಾರಾಷ್ಟ್ರದ ಹಲವು ಕಡೆ ಕನ್ನಡಿಗರ ಆಸ್ತಿ-ಪಾಸ್ತಿ, ಬ್ಯಾಂಕ್ ಮತ್ತು ವಾಹನಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ. ಎ. ನಾರಾಯಣ ಗೌಡರ ಆದೇಶದ ಮೇರೆಗೆ, ಜಿಲ್ಲಾಧ್ಯಕ್ಶರಾದ ಸುಜಯ್ ಪೂಜಾರಿಯವರ ನೇತ್ರತ್ವದಲ್ಲಿ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ನೆರವಿಗೆ ಕೇಂದ್ರ ಸರ್ಕಾರ ನಿಲ್ಲುವಂತೆ ಒತ್ತಾಯಿಸಿ, ಇಂದು ತಾ: 08.12.2022 ರ ಬೆಳಿಗ್ಗೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್. ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯಾದ ರಾಘವೆಂದ್ರ ನಾಯಕ್, ಜಿಲ್ಲಾ ಸಲಹೆಗಾರರಾದ ಲಕ್ಷ್ಮೀಶ್ ಶೆಟ್ಟಿ, ಜಿಲ್ಲಾ ಮಹಿಳಾ ಸಲಹೆಗಾರರಾದ ಸುನಂದ ಕೋಟ್ಯಾನ್, ಬೃಹ್ಮಾವರ ತಾಲೂಕು ಅಧ್ಯಕ್ಷರಾದ ಫ್ರ್ಯಾಂಕಿ ಡಿ’ಸೋಜ ಕೊಳಲಗಿರಿ, ಬೃಹ್ಮಾವರ ತಾಲೂಕು ಮಹಿಳಾ ಅಧ್ಯಕ್ಷೆ ದೇವಕೀ ಬಾರ್ಕೂರು, ಉಡುಪಿ ತಾಲೂಕು ಅಧ್ಯಕ್ಷರಾದ ಅರಾ ಪ್ರಭಾಕರ್ ಪೂಜಾರಿ, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಗೀತಾ ಪಾಂಗಾಳ, ಉಡುಪಿ ತಾಲೂಕು ಮಹಿಳಾ ಅಧ್ಯಕ್ಷೆ ಮಮತಾ, ಹಾಗೂ ಜಿಲ್ಲಾ ಸದಸ್ಯರಾದ ಕೃಷ್ಣ, ಸುಲತಾ, ಅನುಷಾ, ಜ್ಯೋತಿ ಅಶೋಕ್, ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.